ಬಿಹಾರ । ಬಾಲಕಿಯ ಅಪಹರಣ ಪ್ರಕರಣ ಹಿಂಪಡೆಯದ ದಲಿತನಿಗೆ ಮಾರಣಾಂತಿಕ ಹಲ್ಲೆ; ವೀಡಿಯೋ ವೈರಲ್

Prasthutha|

ಬಿಹಾರ: ಬಾಲಕಿಯನ್ನು ಅಪಹರಿಸಿದ ಪ್ರಕರಣವನ್ನು ಹಿಂಪಡೆಯದ ನೆಪವೊಡ್ಡಿ ದಲಿತನೊಬ್ಬನಿಗೆ ನಿರ್ದಯಿ ಪೊಲೀಸರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹೃದಯ ವಿದ್ರಾವಕ ಘಟನೆ ಬಿಹಾರದ ಭೋಜ್‌ಪುರದಲ್ಲಿ ನಡೆದಿದೆ.

- Advertisement -

ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಲಿತ ಬಾಲಕಿಯನ್ನು ಅಪಹರಿಸಿದಕ್ಕೆ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಬಲವಂತಪಡಿಸಿ ದಲಿತ ಯುವಕನಿಗೆ ಗ್ರಾಮಸ್ಥರು ಸೇರಿಕೊಂಡು ನಿರ್ದಯಿ ಪೊಲೀಸರ ಸಮ್ಮುಖದಲ್ಲಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಲಿತ ಯುವಕನನ್ನು ಅಟ್ಟಾಡಿಸಿಕೊಂಡು ಕಲ್ಲು ಮತ್ತು ಇತರ ಆಯುಧಗಳಿಂದ ಥಳಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರ ಮತ್ತು ಪೊಲೀಸರ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp