ಮಗನ ಶವ ನೀಡಲು 50,000 ‘ಲಂಚ’ ಕೇಳಿದ ಆಸ್ಪತ್ರೆ: ಹಣ ಪಾವತಿಗೆ ಭಿಕ್ಷಾಟನೆಗಿಳಿದ ಬಿಹಾರ ದಂಪತಿ

Prasthutha|

ಸಮಸ್ತಿಪುರ: ವೃದ್ಧ ದಂಪತಿಯೊಬ್ಬರು ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣಕ್ಕಾಗಿ ಭಿಕ್ಷಾಟನೆಗೆ ಇಳಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಮಗನ ಶವ ನೀಡಬೇಕಾದರೆ 50 ಸಾವಿರ ಲಂಚ ಕೊಡಬೇಕೆಂಬ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬೇಡಿಕೆಯನ್ನು ಪೂರೈಸಲು ತನ್ನ ಪತಿಯೊಂದಿಗೆ ಮಹಿಳೆ ಭಿಕ್ಷೆ ಬೇಡಿದ್ದಾರೆ.

- Advertisement -

ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮಗನ ಶವ ನೀಡಲು ದಂಪತಿ ಬಳಿ 50 ಸಾವಿರ ಕೇಳಿದ್ದಾರೆ ಎನ್ನಲಾಗಿದೆ. ದಂಪತಿ ಮನೆ ಮನೆಗಳಿಗೆ ತೆರಳಿ ಭಿಕ್ಷೆ ಬೇಡುತ್ತಿರುವ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ. ಈಗ, ನನ್ನ ಮಗನ ಶವ ಸಮಷ್ಟಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂತು. ಶವವನ್ನು ನೀಡಲು ಆಸ್ಪತ್ರೆಯವರು 50 ಸಾವಿರ ರೂ.ಕೇಳಿದರು. ನಾವು ಬಡವರು, ಅಷ್ಟು ಹಣ ಕೊಡಲು ಹೇಗೆ ಸಾಧ್ಯ?‘ ಎಂದು ಮಹೇಶ್ ಠಾಕೂರ್ ಸುದ್ದಿಗಾರರ ಜೊತೆ ನೋವು ತೋಡಿಕೊಂಡರು.

- Advertisement -

ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp