ಮಂಗಳೂರು | ಕಾರಿನಲ್ಲೇ ಪ್ರೇಮಿಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಾವಿಗೆ ಕಾರಣ ಬಯಲು

Prasthutha|

ಉಡುಪಿ: ಬ್ರಹ್ಮಾವರದಲ್ಲಿ ಬೆಂಗಳೂರು ಮೂಲದ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಮದುವೆಗೆ ಮನೆಯವರು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

- Advertisement -

ಬೆಂಗಳೂರಿನ ಹೆಬ್ಬಾಳದ ಯಶವಂತ್ ಯಾದವ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿದ್ದರು.

ನಿನ್ನೆ(ಶನಿವಾರ) ಮದುವೆ ಮಾಡಿಕೊಂಡ ನಂತರ ಮನೆಗೆ ಕರೆ ಮಾಡಿದ್ದಾರೆ. ಆದರೆ, ಮನೆಯವರು ನಿರಾಕರಣೆ ಹಿನ್ನೆಲೆ ಆತಂಕಕ್ಕೊಳಗಾಗಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಯಶವಂತ್ ಬೈಕ್‌ ನಲ್ಲಿ ಯುವತಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಮಂಗಳೂರಿನ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿ ಪೋಟೋಗಳನ್ನ ಕುಟುಂಬಸ್ತರಿಗೆ ಕಳುಹಿಸಿದ್ದಾರೆ.  ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದಾರೆ.  ಈ ಹಿನ್ನೆಲೆ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು.‌

ಮಂಗಳೂರಿನಿಂದ ಸೆಲ್ಪ್ ಡ್ರೈವ್ ನಲ್ಲಿ ಕಾರ್ ಪಡೆದಿದ್ದರು. ಹಾಗೇ ಬಾಟೆಲ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಮಧ್ಯ ರಾತ್ರಿವರೆಗೂ ಸುತ್ತಾಡಿ  ಬಳಿಕ ತಡ ರಾತ್ರಿ 2 ಗಂಟೆಗೆ ಕುಟುಂಬಸ್ಥರಿಗೆ ಮೆಸೇಜ್ ಮಾಡಿದ್ದಾರೆ.

ಪ್ರೀತಿಸಿದವರನ್ನೂ ಬಿಡಲು ಸಾಧ್ಯವಿಲ್ಲ.. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ನಮ್ಮನ್ನ ಕ್ಷಮಿಸಿಬಿಡಿ ಎಂದು ಮೆಸೇಜ್ ಮಾಡಿದ್ದಾರೆ. 

ಮೆಸೇಜ್‌ ನಂತರ ಕುಟುಂಬಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳದಿಂದ ಲೋಕೇಶನ್ ಕೂಡಾ ಶೇರಿ ಮಾಡಿದ್ದಾರೆ ನಂತರ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಕಾರಿನ ನಂಬರ್ ಪಡೆದು ಪರಿಶೀಲನೆ ನಡೆಸಿದ ಬ್ರಹ್ಮಾವರ ಪೊಲೀಸರು, ಬಾಡಿಗೆ ಪಡೆದಿರುವುದು ಮಾಹಿತಿ ಲಭ್ಯವಾಗಿದೆ. ಬಾಡಿಗೆ ಕಾರು ಪಡೆಯುವಾಗ ಪ್ರೇಮಿಗಳು ನೀಡಿದ್ದ ದಾಖಲೆಗಳ ಆಧಾರದ ಮೇಲೆ ಬ್ರಹ್ಮಾವರ ಪೊಲೀಸರು, ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Join Whatsapp