ಗ್ರಾಹಕರಿಗೆ ಬಿಗ್ ಶಾಕ್ । ಈ ತಿಂಗಳಿನಿಂದ ಮಾರುತಿ ಸುಝುಕಿ ವಾಹನಗಳು ದುಬಾರಿ !

Prasthutha|

ನವದೆಹಲಿ: ಕಚ್ಚಾ ವಸ್ತುಗಳ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಿನಿಂದ ಎಲ್ಲಾ ಮಾದರಿಯ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿಯಾದ ಮಾರುತಿ ಸುಝುಕಿ ಇಂಡಿಯಾ (ಎಂ.ಎಸ್.ಐ) ಬುಧವಾರ ತಿಳಿಸಿದೆ.

- Advertisement -

ಕಳೆದ ವರ್ಷ ವಿವಿಧ ಆಯಾಮಗಳಲ್ಲಿ ಕಚ್ಚಾ ವಸ್ತುಗಳ ನಿರ್ವಹಣಾ ವೆಚ್ಚಗಳ ಹೆಚ್ಚಳದಿಂದಾಗಿ ಕಂಪೆನಿಯ ವಾಹನಗಳ ಬೆಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಆದ್ದರಿಂದ ವಾಹನದ ಬೆಲೆಯೇರಿಕೆಯ ಮೂಲಕ ಗ್ರಾಹಕರಿಗೆ ಈ ಮೇಲಿನ ಹೆಚ್ಚುವರಿ ವೆಚ್ಚದ ಕೆಲವು ಪರಿಣಾಮವನ್ನು ಅವರಿಗೆ ವರ್ಗಾಯಿಸುವುದು ಕಂಪೆನಿಗೆ ಅನಿವಾರ್ಯವಾಗಿದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಕಂಪೆನಿಯು ಏಪ್ರಿಲ್ ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜನೆ ಹಾಕಿದೆ ಎಂದು ತಿಳಿಸಿದೆ.

- Advertisement -

ಅದಾಗ್ಯೂ ಬೆಲೆಯೇರಿಕೆಯ ಪ್ರಮಾಣವನ್ನು ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ. ಕಚ್ಚಾ ವಸ್ತುಗಳ ವೆಚ್ಚಗಳಲ್ಲಿನ ನಿರಂತರ ಹೆಚ್ಚಳದಿಂದಾಗಿ MSI ಸಂಸ್ಥೆ ಈಗಾಗಲೇ ತನ್ನ ವಾಹನದ ಬೆಲೆಯನ್ನು 2021 ರ ಜನವರಿಯಿಂದ ಮಾರ್ಚ್ 2022 ರವರೆಗೆ ಸುಮಾರು 8.8 ಶೇಕಡಾ ಹೆಚ್ಚಿಸಿದೆ.

ಸದ್ಯ ಸುಝುಕಿ ಕಂಪೆನಿಯು ದೇಶಿಯ ಮಾರುಕಟ್ಟೆಯಲ್ಲಿ ಆಲ್ಟೋದಿಂದ ಪ್ರಾರಂಭಿಸಿ ಎಸ್ – ಕ್ರಾಸ್ ವರೆಗೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.



Join Whatsapp