ಬೀದರ್| ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ ಅಮಾನತು

Prasthutha|

ಬೀದರ್: ಡ್ಯೂಟಿಗೆ ಲೇಟಾಗಿ ಬಂದಿದ್ದನ್ನು ಪ್ರಶ್ನೆ ಮಾಡಿದ ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ.

- Advertisement -

ಮಹಿಳಾ ಠಾಣೆ ಪಿಎಸ್‌ಐ ಮಲ್ಲಮ್ಮ ಮೇಲೆ ಹಲ್ಲೆ ಮಾಡಿ ಅಶಿಸ್ತಿನ ವರ್ತನೆ ತೊರಿದ ಹಿನ್ನಲೆಯಲ್ಲಿ ನ್ಯೂಟೌನ್ ಠಾಣೆಯ ಕಾನ್‌ಸ್ಟೆಬಲ್ ಧನರಾಜ್‌ನನ್ನು ಅಮಾನತುಗೊಳಿಸಿ ಎಸ್ಪಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ.

ಕೆಇಎ ಪರೀಕ್ಷೆ ಭದ್ರತಾ ಸಮಯದಲ್ಲಿ ಬಂದೋಬಸ್ತ್‌ಗೆ ಕಾನ್‌ಸ್ಟೇಬಲ್ ಧನರಾಜ್ ತಡಮಾಡಿ ಕೇಂದ್ರಕ್ಕೆ ಬಂದಿದ್ದನ್ನ ಪ್ರಶ್ನೆ ಮಾಡಿದ ಪಿಎಸ್‌ಐ ಮಲ್ಲಮ್ಮ ಮೇಲೆ ಕಾನಸ್ಟೇಬಲ್ ಗಂಬೀರವಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.



Join Whatsapp