ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ

Prasthutha|

ಅಹ್ಮದಾಬಾದ್ : ಜಿಲ್ಲೆಯ ಘಟ್ಲೋಡಿಯಾ ಕ್ಷೇತ್ರದಿಂದ 1.92 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಭೂಪೇಂದ್ರ ಪಟೇಲ್ ಅವರು, ಗುಜರಾತ್ 18ನೇ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಇಂದು ಪ್ರಮಾಣವಚನ ಸ್ವೀಕರಿಸಿದರು.

- Advertisement -

ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್  ಅವರು ಪ್ರಮಾಣ ವಚನ ಬೋಧಿಸಿದರು.

ಪಟೇಲ್ ಅವರಲ್ಲದೆ, ಬಿಜೆಪಿ ಶಾಸಕರಾದ ಕನುಭಾಯಿ ದೇಸಾಯಿ (ಪಾರ್ಡಿ), ರುಶಿಕೇಶ್ ಪಟೇಲ್ (ವಿಸ್ ನಗರ), ರಾಘವ್ಜಿ ಪಟೇಲ್ (ಜಾಮ್ ನಗರ ಗ್ರಾಮೀಣ) ಮತ್ತು ಬಲವಂತ್ ಸಿಂಗ್ ರಜಪೂತ್ (ಸಿದ್ದಾಪುರ) ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ನಾಯಕರಾದ ಕುನ್ವರ್ಜಿ ಬವಾಲಿಯಾ, ಮುಲೋಭಾಯಿ ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಾಬರಿಯಾ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಹರ್ಷ ಸಾಂಘವಿ ಮತ್ತು ಜಗದೀಶ್ ವಿಶ್ವಕರ್ಮ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಅಧಿಕಾರದಲ್ಲಿರುವ ಉಳಿದ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

182 ಸದಸ್ಯ ಬಲದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿತ್ತು.ಹೊಸ ಸರ್ಕಾರ ರಚನೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ 60 ವರ್ಷದ ಭೂಪೇಂದ್ರ ಪಟೇಲ್, ಶುಕ್ರವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Join Whatsapp