ಭೀಮಾ ಕೋರೆಗಾಂವ್ ಪ್ರಕರಣ । ವರವರ ರಾವ್ ಅವರ ಮೆಡಿಕಲ್ ಜಾಮೀನು ವಿಸ್ತರಿಸಿದ ಹೈಕೋರ್ಟ್

Prasthutha|

ನವದೆಹಲಿ: ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ, ಖ್ಯಾತ ಕವಿ ವರವರ ರಾವ್ ಅವರು ಜೈಲಿಗೆ ಮರಳಲು ನೀಡಿದ್ದ ಅವಧಿಯನ್ನು ಬಾಂಬೆ ಹೈಕೋರ್ಟ್ ಶನಿವಾರ ಮಾರ್ಚ್ 3ರವರೆಗೆ ವಿಸ್ತರಿಸಿದೆ.

- Advertisement -

ವರವರ ರಾವ್ ಅವರಿಗೆ ಕಳೆದ ವರ್ಷ ಫೆಬ್ರವರಿ 22 ರಂದು ಆರು ತಿಂಗಳ ವೈದ್ಯಕೀಯ ಜಾಮೀನು ನೀಡಲಾಗಿತ್ತು ಮತ್ತು ನಂತರ ಅದನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿತ್ತು.

ಸದ್ಯ ವರವರ ರಾವ್ ಅವರು ಜೈಲಿನಿಂದ ಬಿಡುಗಡೆಯಾದ ನಂತರದ ಆರು ತಿಂಗಳ ಅವಧಿಯು ಸೆಪ್ಟೆಂಬರ್ 5, 2021 ರಂದು ಕೊನೆಗೊಂಡಿತ್ತು. ಇದೀಗ ಅವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

- Advertisement -

ಪ್ರಸಕ್ತ ವರವರ ರಾವ್ ಅವರು ಪಾರ್ಕಿನ್ಸನ್, ನರರೋಗ ಮತ್ತು ತೀವ್ರವಾದ ಜಟರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ.

ಈ ಹಿಂದೆ ಷರತ್ತುಬದ್ಧ ಜಾಮೀನಿನಲ್ಲಿ ಉಲ್ಲೇಖಿಸಿದಂತೆ ಮುಂಬೈ ತೊರೆಯಬಾರದೆಂಬ ಷರತ್ತು ಬದಲಾವಣೆ ಮಾಡಿ ತೆಲಂಗಾಣಕ್ಕೆ ಮರಳಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಮಧ್ಯೆ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಶುಕ್ರೆ ನೇತೃತ್ವದ ಪೀಠ, ರಾವ್ ಅವರ ಡೀಫಾಲ್ಡ್ ಜಾಮೀನು ಅರ್ಜಿಯನ್ನು ಮಾರ್ಚ್ 1 ಕ್ಕೆ ಮುಂದೂಡಿದೆ.

Join Whatsapp