TIME ಮ್ಯಾಗಝಿನ್ 100 ಟಾಪ್ ಉದಯೋನ್ಮುಖ ನಾಯಕರಲ್ಲಿ ಭೀಮ್ ಆರ್ಮಿ ಚಂದ್ರಶೇಖರ್ ಆಝಾದ್!

Prasthutha|

ನವದೆಹಲಿ : ಪ್ರತಿಷ್ಠಿತ ‘TIME’ ಮ್ಯಾಗಝಿನ್ ನ ವಾರ್ಷಿಕ 100 ಭವಿಷ್ಯ ರೂಪಿಸುವ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭಾರತದ ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಝಾದ್ ಸ್ಥಾನ ಪಡೆದಿದ್ದಾರೆ. ಆಝಾದ್ ಜೊತೆಗೆ ಭಾರತ ಮೂಲದ ವಕೀಲ ವಿಜಯ ಗದ್ದೆ, ಯುಕೆಯ ಹಣಕಾಸು ಸಚಿವ ರಿಷಿ ಸುನಕ್, ಇನ್ಸ್ಟಾಕಾರ್ಟ್ ಸಂಸ್ಥಾಪಕ ಮತ್ತು ಸಿಇಒ ಅಪೂರ್ವ ಮೆಹ್ತಾ, ವೈದ್ಯರುಗಳಾದ ಶಿಖಾ ಗುಪ್ತಾ ಮತ್ತು ರೋಹನ್ ಪಾವುಲೂರಿ ಈ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.

- Advertisement -

ಬುಧವಾರ ಬಿಡುಗಡೆಯಾದ ಈ ಪಟ್ಟಿಯಲ್ಲಿ ಭಾರತ ಮೂಲದ ಆರು ಮಂದಿ ಆಯ್ಕೆಯಾಗಿದ್ದಾರೆ.

ಸಹರಾನ್ ಪುರದ ಚತ್ಮಾಲ್ ಪುರದ ಬಳಿಯ ಘದ್ಕೌಲಿ ಗ್ರಾಮದಲ್ಲಿ 1986, ಡಿ.2ರಂದು ಜನಿಸಿರುವ ಚಂದ್ರಶೇಖರ್ ಆಝಾದ್, 2015ರಲ್ಲಿ ತಮ್ಮ ಊರಿನಲ್ಲಿ ‘ಘದ್ಕೌಲಿ ವೆಲ್ಕಮ್ ಯು ದ ಗ್ರೇಟ್ ಚಮಾರ್ಸ್’ ಎಂಬ ಬೋರ್ಡ್ ಹಾಕುವ ಮೂಲಕ. ಕಾನೂನು ಅಧ್ಯಯನ ಮಾಡಿರುವ ಚಂದ್ರಶೇಖರ್, 2014ರಲ್ಲಿ ಭೀಮ್ ಆರ್ಮಿ ಎನ್ನುವ ಸಂಘಟನೆ ಕಟ್ಟುವ ಮೂಲಕ, ತಮ್ಮ ಪ್ರದೇಶದಲ್ಲಿ ಹಲವು ಪರಿವರ್ತನೆಗೆ ಸಾಕ್ಷಿಯಾದರು.

- Advertisement -

ಸಹರಾನ್ ಪುರದ ಶಬ್ಬೀರ್ ಪುರದ ಗ್ರಾಮದಲ್ಲಿ 2017ರಲ್ಲಿ ಮೇಲ್ಜಾತಿ ಠಾಕೂರರು ದಲಿತರ ಮೇಲೆ ದೌರ್ಜನ್ಯವೆಸಗಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದುದು ದೇಶಾದ್ಯಂತ ಸುದ್ದಿಯಾಗಿತ್ತು. ಆ ಬಳಿಕ ಅವರು ಬಂಧಿಸಲ್ಪಟ್ಟು, ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಬಿಡುಗಡೆಯ ನಂತರ ಸಿಎಎ, ಎನ್ ಆರ್ ಸಿ ಹೋರಾಟದಲ್ಲಿ ಭಾಗಿಯಾಗಿ ಗಮನ ಸೆಳೆದರು.

ಇದೀಗ ಅವರು ಆಝಾದ್ ಸಮಾಜ ಪಕ್ಷ ಸ್ಥಾಪಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ. ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಆಶಯಗಳನ್ನು ಈಡೇರಿಸಲು ತಮ್ಮ ಜೀವನ ಮುಡಿಪಾಗಿಟ್ಟು, ಹೋರಾಟದ ಜೀವನ ಸಾಗಿಸುತ್ತಿದ್ದಾರೆ.

Join Whatsapp