ಭಟ್ಕಳ: ತಾಯಿ, ಮಗು ಕಾಣೆ

Prasthutha|

ಕಾರವಾರ: ಭಟ್ಕಳದ ಕೋಳಿ ಫಾರ್ಮ, ಬದ್ರಿಯಾ ಕಾಲೋನಿ ನಿವಾಸಿ ಮಿಶ್ರಿಯಾ ಎಂಬ 25ವರ್ಷದ ಮಹಿಳೆ ಜ. 30 ರಂದು ಕಾಣೆಯಾಗಿದ್ದಾರೆಂದು ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ.

- Advertisement -

ಜ.30ರಂದು ಬೆಳಗ್ಗೆ 11 ಗಂಟೆಗೆ ತನ್ನ 2 ವರ್ಷದ ಮಗಳು ಆಯಿಶಾ ಮೀನಾ ಅವಳೊಂದಿಗೆ ತಾಯಿ ಮನೆಗೆ ಹೋಗುತ್ತೇನೆ ಎಂದು ಪಕ್ಕದ ಮನೆಯವರಿಗೆ ಹೇಳಿ ಹೋಗಿದ್ದು, ತನ್ನತಾಯಿ ಮನೆಗೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ:
ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು, 5.0 ಅಡಿ ಎತ್ತರ, ಬಲಗಣ್ಣಿನ ಹತ್ತಿರಕಪ್ಪು ಎಳ್ಳಿನ ಗುರುತು. ಬ್ಯಾರಿ, ಕನ್ನಡ ಭಾಷೆ ಮಾತನಾಡುತ್ತಾರೆ.

- Advertisement -

ಕಾಣೆಯಾದ ಮಗುವಿನ ಚಹರೆ:
ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು 3ಅಡಿ ಎತ್ತರ. ಬ್ಯಾರಿ ಭಾಷೆ ಮಾತನಾಡುತ್ತಾಳೆ.

ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯ ದೂರವಾಣಿ ಸಂಖ್ಯೆ 08385-227333, ಮೊಬೈಲ್ ನಂ. 9480805252, ಕಾರವಾರ ಪೊಲೀಸ್ ಕಂಟ್ರೋಲ್‌ ರೂ. 08382-226550 ಅಥವಾ 112 ಅಥವಾ 100 ಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್‌ಠಾಣೆ ಪೊಲೀಸ್‌ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp