ಭಟ್ಕಳ: ಒಂದೇ ದಿನ ತಾಯಿ ಮತ್ತು ಮಗಳು ನೇಣಿಗೆ ಶರಣಾದ ಘಟನೆ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋರಿಕಲ್ಲು ಮನೆಯಲ್ಲಿ ನಡೆದಿದೆ.
ಮೃತರನ್ನು ಗೋರಿಕಲ್ಲು ಮನೆಯ ಕೃಷ್ಣಮ್ಮ ನಾರಾಯಣ ನಾಯ್ಕ (57) ಹಾಗೂ ಅವರ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (36) ಮೃತರು.
ಕೃಷ್ಣಮ್ಮ ಅವರ ಮಗಳು ಮಾದೇವಿ ತಾಯಿಯ ಮನೆಯ ಸಮೀಪದಲ್ಲಿಯೇ ಮನೆ ಮಾಡಿಕೊಂಡಿದ್ದರು. ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಇಂದು ಮನೆಯಲ್ಲಿದ್ದ ಎಲ್ಲರೂ ಸಂಬಂಧಿಕರ ಮದುವೆ ಹೋಗಿದ್ದ ವೇಳೆ ಒಬ್ಬಳೇ ಮಾದೇವಿ ನೇಣಿಗೆ ಶರಣಾಗಿದ್ದಾರೆ. ಮಾದೇವಿ ಮನೆಗೆ ಬಂದ ಕೃಷ್ಣಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದನ್ನು ಕಂಡವರು ತೀರಾ ನೊಂದುಕೊಂಡಿದ್ದರು. ಬಳಿಕ ಮನೆಗೆ ಹೋಗಿ ತಾನೂ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.