ಡ್ರಗ್ಸ್ ಕೇಸ್ | ಕಾಮಿಡಿ ನಟಿ ಭಾರತಿ ಸಿಂಗ್, ಹರ್ಷ್ ದಂಪತಿಗೆ ಜಾಮೀನು ಮಂಜೂರು

Prasthutha|

ಮುಂಬೈ : ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿರುವ ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾಗೆ ಮುಂಬೈ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಇಬ್ಬರು ಆರೋಪಿಗಳಿಗೂ ತಲಾ 15,000 ರೂ. ಜಾಮೀನು ಬಾಂಡ್ ಸಲ್ಲಿಸುವಂತೆ ಆದೇಶಿಸಿದ್ದಾರೆ.

- Advertisement -

ಭಾರತಿ ಸಿಂಗ್ ಶನಿವಾರ ಬಂಧಿತರಾಗಿದ್ದರು ಮತ್ತು ಹರ್ಷ್ ಭಾನುವಾರ ಬಂಧಿತರಾಗಿದ್ದರು. ರಜಾಕಾಲೀನ ನ್ಯಾಯಾಧೀಶರ ಮುಂದೆ ಅವರನ್ನು ಹಾಜರು ಪಡಿಸಿದ್ದಾಗ, ಅವರು ಡಿ.4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.

ಭಾರತಿ ಸಿಂಗ್ ಅವರ ಪ್ರೊಡಕ್ಷನ್ ಕಚೇರಿ ಮತ್ತು ನಿವಾಸದಲ್ಲಿ ಮಾದಕ ದ್ರವ್ಯ ಪತ್ತೆಯಾಗಿತ್ತು. ಭಾರತಿ ಮತ್ತು ಹರ್ಷ್ ಟಿವಿ ಕಲಾವಿದರು, ಅವರು ಜೈಲಿನಲ್ಲಿರುವುದರಿಂದ ಶೂಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಅಯಾಝ್ ಖಾನ್ ವಾದಿಸಿದರು. ಮಾದಕದ್ರವ್ಯ ತಡೆ ಸಂಸ್ಥೆಯ ಪರವಾಗಿ ನ್ಯಾಯವಾದಿಗಳು ಕೋರ್ಟ್ ಗೆ ಹಾಜರಾಗಿರಲಿಲ್ಲ.

ಭಾರತಿ ಸಿಂಗ್ ಈ ಹಿಂದೆ ಬಿಜೆಪಿ ಪರ ಪ್ರಚಾರ ನಡೆಸಿದ್ದ, ಟಿವಿ ಶೋಗಳಲ್ಲಿ ಖ್ಯಾತಿ ಪಡೆದಿರುವ ಕಾಮಿಡಿ ನಟಿ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ವಾಟ್ಸಪ್ ಚಾಟ್ ಗಳ ಆಧಾರದಲ್ಲಿ, ಬಾಲಿವುಡ್ ನಲ್ಲಿ ಡ್ರಗ್ ಬಳಕೆಯ ಬಗ್ಗೆ ಎನ್ ಸಿಬಿ ತನಿಖೆ ನಡೆಸುತ್ತಿದೆ.

- Advertisement -