ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತರಬೇಕು ಎಂದ ಭಾರತಿ ಶೆಟ್ಟಿ

Prasthutha|

ಬೆಂಗಳೂರು: ರಾಜ್ಯದಲ್ಲಿ ಜನಸಂಖ್ಯಾ ಹೆಚ್ಚಾಗುತ್ತಿಲ್ಲ. ಸರ್ಕಾರದ ಕ್ರಮಗಳ ಹೊರತಾಗಿಯೂ ಜನಸಂಖ್ಯೆ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತರಬೇಕು. ಎರಡು ಮಕ್ಕಳಿರುವ ಕುಟುಂಬಗಳಿಗೆ ಮಾತ್ರ ಸರ್ಕಾರಿ ಸೌಲಭ್ಯ ಕೊಡಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಆಗ್ರಹಿಸಿದ್ದಾರೆ.

- Advertisement -

ವಿಧಾನ ಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಸರ್ಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳು ಇದ್ದವರಿಗೆ ಸರ್ಕಾರಿ ಸೌಲಭ್ಯ ಇಲ್ಲ ಎಂದು ಆದೇಶ ಹೊರಡಿಸಿದೆ. ಅದನ್ನು ಪರಿಶೀಲಿಸಿ ನಮ್ಮ ರಾಜ್ಯದಲ್ಲಿಯೂ ಜಾರಿ ತರಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೆರಿಗೆ ಹಣ ಪೋಲಾಗುತ್ತಿದೆ. ಜನರ ತೆರಿಗೆ ಸರಿಯಾಗಿ ವಿನಿಯೋಗ ಆಗಬೇಕು. ತೆರಿಗೆ ಹಣ ಕೊಡುವವರು ಯಾರೋ, ಫಲಾನುಭವಿಗಳು ಆಗೋದು ಇನ್ಯಾರೋ ಆಗಬಾರದು.

- Advertisement -

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ವರಿಗೂ ಸಮಪಾಲು ಅನ್ವಯ ಆಗಲ್ಲ. ಹೆಚ್ಚು ಮಕ್ಕಳಿದ್ದವರ ಮನೆಗೆ ಹೆಚ್ಚು ಅಕ್ಕಿ ಕೊಡುವಂತಹ ಪರಿಸ್ಥಿತಿ ಇದೆ. ಒಂದು ಮನೆಗೆ ಒಂದು ಕ್ವಿಂಟಾಲ್ ಅಕ್ಕಿ ಕೊಡುತ್ತಿದೆ. ಸಬ್ಸಿಡಿಯಲ್ಲಿ ಹೆಚ್ಚು ಮಕ್ಕಳಿರುವ ಮನೆಗೆ ಹೆಚ್ಚು ಅಕ್ಕಿ ಕೊಡುತ್ತಿದೆ ಸರ್ಕಾರ. ಜನಸಂಖ್ಯೆ ಹೆಚ್ಚಳ ಆರ್ಥಿಕ ಕುಸಿತಕ್ಕೂ ಕಾರಣವಾಗುತ್ತಿದೆ ಎಂದು ಹೇಳಿದರು.

Join Whatsapp