ತುಮಕೂರು ಜಿಲ್ಲೆಗೆ ಭಾರತ್ ಜೋಡೋ ಯಾತ್ರೆ ಪ್ರವೇಶ: ರಾಹುಲ್ ಜೊತೆ ಹೆಜ್ಜೆ ಹಾಕಿದ JDS ಉಚ್ಚಾಟಿತ ಶಾಸಕ

Prasthutha|

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ತುಮಕೂರು ಜಿಲ್ಲೆ ಪ್ರವೇಶಿಸಿದ್ದು, ಆಗಸ್ಟ್ 10ರವರೆಗೂ ಕಲ್ಪತರು ನಾಡಿನಲ್ಲಿ ಐಕ್ಯತಾ ನಡಿಗೆ ಸಾಗಲಿದೆ.

- Advertisement -


ರಾಹುಲ್ ಗಾಂಧಿ ಅವರಿಗೆ ಶನಿವಾರ ಬೆಳಗ್ಗೆ ಮಾಯಸಂದ್ರದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ , ಬೆಮಲ್ ಕಾಂತರಾಜು, ರಫೀಕ್ ಅಹ್ಮದ್, ಷಡಕ್ಷರಿ ಸೇರಿದಂತೆ ಹಲವು ಮುಖಂಡರು ಅದ್ಧೂರಿ ಸ್ವಾಗತ ಕೋರಿ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.


ಇಂದಿನ ಪಾದಯಾತ್ರೆಯಲ್ಲಿ ಜೆಡಿಎಸ್ ರೆಬಲ್ ಶಾಸಕ ಎಸ್.ಆರ್.ಶ್ರೀನಿವಾಸ್ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಆ ಮೂಲಕ ಅನರ್ಹತೆಗೆ ದೂರು ಕೊಟ್ಟ ಜೆಡಿಎಸ್ ನಾಯಕರಿಗೆ ಗುಬ್ಬಿ ಶಾಸಕ ಟಕ್ಕರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಮಹತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಎಸ್.ಆರ್.ಶ್ರೀನಿವಾಸ್, ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ತುರುವೇಕೆರೆಯಿಂದ-ಕೆ.ಬಿ.ಕ್ರಾಸ್ ವರೆಗೂ ಪಾದಯಾತ್ರೆ ನಿರ್ವಹಣೆಯನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಶ್ರೀನಿವಾಸ್ ಪಾದಯಾತ್ರೆಯಲ್ಲಿ ರಾಹುಲ್ ಅವರೊಂದಿಗೆ ಕೆಲಕಾಲ ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.



Join Whatsapp