ಭಾರತ್ ಜೋಡೋ ಯಾತ್ರೆಯು ನನಗೆ ಮೌನದ ಸೌಂದರ್ಯವನ್ನು ಕಲಿಸಿತು: ರಾಹುಲ್ ಗಾಂಧಿ

Prasthutha|

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಭಾರೀ ಸದ್ದು ಮಾಡಿ ಅದು ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯ ಕೂಡ ಮಾಡಿತು.

- Advertisement -


ಇಂದು ಅದರ ಎರಡನೇ ವಾರ್ಷಿಕೋತ್ಸವ, ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿರುವ ರಾಹುಲ್ ಗಾಂಧಿ, ಭಾರತೀಯರು ಅಂತರ್ಗತವಾಗಿ ಜನರನ್ನು ಪ್ರೀತಿಸುತ್ತಾರೆ ಎಂಬುದನ್ನು ಯಾತ್ರೆ ಸಾಬೀತುಪಡಿಸಿತ್ತು. ದೇಶದ ಪ್ರತಿಯೊಂದು ಮೂಲೆಯಲ್ಲಿ ಪ್ರೀತಿಯ ಧ್ವನಿಯನ್ನು ಕೇಳಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ ಎಂದಿದ್ದಾರೆ.


ಭಾರತ್ ಜೋಡೋ ಯಾತ್ರೆಯು ನನಗೆ ಮೌನದ ಸೌಂದರ್ಯವನ್ನು ಕಲಿಸಿತು. ಹರ್ಷೋದ್ಘಾರದ ಜನಸಮೂಹ ಮತ್ತು ಘೋಷಣೆಗಳ ನಡುವೆ, ನನ್ನ ಪಕ್ಕದಲ್ಲಿರುವ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಅವರ ಮಾತುಗಳನ್ನು ಕೇಳುವ ಶಕ್ತಿಯನ್ನು ನಾನು ಕಂಡುಹಿಡಿದಿದ್ದೇನೆ ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

- Advertisement -


ಭಾರತ್ ಜೋಡೋ ಯಾತ್ರೆಯ ಆ 145 ದಿನಗಳಲ್ಲಿ ಮತ್ತು ಅದರಿಂದಾಚೆಗೆ ಈ ಎರಡು ವರ್ಷಗಳಲ್ಲಿ ನಾನು ವಿವಿಧ ಹಿನ್ನೆಲೆಯ ಸಾವಿರಾರು ಭಾರತೀಯರ ಮಾತುಗಳನ್ನು ಆಲಿಸಿದ್ದೇನೆ. ಪ್ರತಿಯೊಂದು ಧ್ವನಿಯು ಬುದ್ಧಿವಂತಿಕೆಯನ್ನು ಹೊತ್ತಿದೆ, ನನಗೆ ಹೊಸದನ್ನು ಕಲಿಸುತ್ತದೆ ಮತ್ತು ಪ್ರತಿಯೊಬ್ಬರೂ ನಮ್ಮ ಪ್ರೀತಿಯ ಭಾರತ ಮಾತೆಯನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.



Join Whatsapp