ಹಿಮಾಚಲ ಪ್ರದೇಶಕ್ಕೆ ಪ್ರವೇಶ ಮಾಡಿದ ಭಾರತ್ ಜೋಡೊ ಯಾತ್ರೆ

Prasthutha|

ಶಿಮ್ಲಾ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಬುಧವಾರ ಬೆಳಿಗ್ಗೆ ಹಿಮಾಚಲ ಪ್ರದೇಶವನ್ನು ಪ್ರವೇಶ ಮಾಡಿದೆ.

- Advertisement -


ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ರಾಜ್ಯ ಪಕ್ಷದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಸಿಂಗ್, ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಕಾರ್ಯಕರ್ತರು ಇಲ್ಲಿನ ಮನ್ಸೆರಾ ಟೋಲ್ ಪ್ಲಾಜಾದ ಸಮೀಪ ಯಾತ್ರೆಯನ್ನು ಸ್ವಾಗತಿಸಿದರು.


ಭಾರತ್ ಜೋಡೊ ಯಾತ್ರೆ ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಮೂಲಕ ಹಾದುಹೋಗಿದೆ. ಇದೀಗ ಹಿಮಾಚಲ ಪ್ರವೇಶ ಮಾಡಿದೆ. (ಜನವರಿ) 30 ರಂದು ಜೋಡೊ ಯಾತ್ರೆ ಮುಕ್ತಾಯವಾಗಲಿದೆ.



Join Whatsapp