ಬಿಜೆಪಿ-ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ

Prasthutha|

ತೆಲಂಗಾಣ: ಭಾರತ್ ಜೋಡೋ ಯಾತ್ರೆಯು ಬಿಜೆಪಿ, ಆರೆಸ್ಸೆಸ್’ನ ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

- Advertisement -

ಬಿಜೆಪಿ ಮತ್ತು ಆರೆಸ್ಸೆಸ್ ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಅವರು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಮುಗಿಸಿ ತೆಲಂಗಾಣಕ್ಕೆ ಪ್ರವೇಶಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು, ಪಾದಯಾತ್ರೆಯು ಬೆಲೆಯೇರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಧ್ವನಿಯೆತ್ತಲಿದೆ ಎಂದು ತಿಳಿಸಿದರು.

- Advertisement -

ಸದ್ಯ ಎರಡು ಭಾರತಗಳು ಅಸ್ತಿತ್ವದಲ್ಲಿದೆ ಎಂದು ಪುನರಚ್ಚರಿಸಿದ ರಾಹುಲ್ ಗಾಂಧಿ, ಒಂದು ಆಯ್ದ ಕೆಲವು ಶ್ರೀಮಂತರ ಭಾರತ ಮತ್ತು ಇನ್ನೊಂದು ಲಕ್ಷಾಂತರ ಯುವಕ, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಭಾರತ ಎಂದು ತಿಳಿಸಿದರು.

ನಮಗೆ ಈ ಎರಡೂ ಭಾರತ ಬೇಡ. ನಮಗೆ ಎಲ್ಲರಿಗೂ ಸಮಾನ ನ್ಯಾಯ, ಉದ್ಯೋಗವಿರುವ ಒಂದೇ ಭಾರತ ಬೇಕಾಗಿದೆ. ದೇಶದಲ್ಲಿ ಭ್ರಾತೃತ್ವ ಇರಬೇಕು ಎಂದು ರಾಹುಲ್ ಗಾಂಧಿ ತಿಳಿಸಿದರು.



Join Whatsapp