ವ್ಯಾಪಾರಿಗಳೂ ಮೋದಿ ಸರಕಾರದ ವಿರುದ್ಧ ಗರಂ | ಫೆ.26ರಂದು ‘ಭಾರತ ಬಂದ್’

Prasthutha|

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಬಂಧನಗೆಗಳನ್ನು ಪರಿಶೀಲಿಸಲು ಆಗ್ರಹಿಸಿ ಫೆ.26ರಂದು ಅಖಿಲ ಭಾರತ ವರ್ತಕರ ಸಂಘಟನೆ ಭಾರತ ಬಂದ್ ಗೆ ಕರೆ ನೀಡಿದೆ.

- Advertisement -

ಜಿಎಸ್ಟಿಯ ಕಠಿಣ ನಿಬಂಧನೆಗಳನ್ನು ಪರಿಶೀಲಿಸಬೇಕೆಂದು ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ಜಿಎಸ್ಟಿ ಕೌನ್ಸಿಗಳಿಗೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ತಿಳಿಸಿದೆ.

ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಜಿಎಸ್ಟಿಯನ್ನು ಸರಳೀಕರಣಗೊಳಿಸಬೇಕು ಎಂದು ವ್ಯಾಪಾರಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಆಗ್ರಹಿಸಿದ್ದಾರೆ. ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ ಭಾರತ ಬಂದ್ ಗೆ ಬೆಂಬಲ ಸೂಚಿಸಿದೆ.  



Join Whatsapp