ಭಬಾನಿಪುರ ಚುನಾವಣೆಗೆ ತಡೆ ಇಲ್ಲ ಎಂದ ಕೊಲ್ಕತ್ತ ಹೈಕೋರ್ಟ್

Prasthutha|

ಕೋಲ್ಕತ್ತಾ: ಭಬಾನಿಪುರ ಉಪ ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾ ಮಾಡಿದ ಕೊಲ್ಕತ್ತ ಹೈಕೋರ್ಟ್, ಉಪ ಚುನಾವಣೆ ನಿಗದಿಯಂತೆ ಸೆಪ್ಟಂಬರ್ 30ರಂದೇ ನಡೆಯುತ್ತದೆ ಎಂದು ಹೇಳಿದೆ.

- Advertisement -

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಲ್, ಜಸ್ಟಿಸ್ ಆರ್. ಭಾರದ್ವಾಜ್ ಅವರಿದ್ದ ಪೀಠವು ಮಂಗಳವಾರ ಚುನಾವಣೆ ಮುಂದೂಡಲು ಕೋರಿದ್ದ ಅರ್ಜಿ ವಜಾ ಮಾಡಿತು. ಉಪ ಚುನಾವಣೆ ಪ್ರಶ್ನಿಸಿ ಮುಂದೂಡಲು ಕೇಳುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂದು ಪೀಠ ಕೇಳಿತು.



Join Whatsapp