ರೋಗಿಗೆ ಮೃತಪಟ್ಟ ವ್ಯಕ್ತಿಯ ಯಕೃತ್ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ

Prasthutha|

ಬೆಂಗಳೂರು: 43 ವರ್ಷದ ರೋಗಿಯ ಜೀವ ಉಳಿಸಲು ಮೃತ ವ್ಯಕ್ತಿಯ ಯಕೃತ್ ಪಡೆಯುವ ಸಲುವಾಗಿ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ವೃತ್ತಿಪರರ ತಂಡ ರಾತ್ರೋರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸಿ, ಯಶಸ್ವಿಯಾಗಿ ಕಸಿ ಮಾಡಿ ರೋಗಿಯ ಜೀವ ಉಳಿಸಿದೆ. ಮೃತಪಟ್ಟ ವ್ಯಕ್ತಿಯ ಯಕೃತ್ ಅನ್ನು ಬೆಳಗಾವಿಯಿಂದ ಬೆಂಗಳೂರಿಗೆ ತಂದು ಶಸ್ತ್ರಚಿಕಿತ್ಸೆಯನ್ನು ಸಫಲಗೊಳಿಸಿದೆ.
ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ವೈದ್ಯರ ತಂಡ ಬೆಳಗಾವಿಯ 43 ವರ್ಷದ ರೋಗಿಯ ಜೀವ ಉಳಿಸಲು ಕೈಗೊಂಡ ಸವಾಲನ್ನು ಫಲಪ್ರದವಾಗಿ ಸಾಕಾರಗೊಳಿಸಿದೆ. ರೋಗಿ ಬಹು ವಿಧದ ಸಹ ಅಸ್ವಸ್ತತೆಯಿಂದ ಬಳಲುತ್ತಿದ್ದು, ಮೂರು ತಿಂಗಳಿಂದ ಸೂಕ್ತ ಕಾಲದಲ್ಲಿ ಯಕೃತಿನ ಕಸಿ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ.
ಶಸ್ತ್ರ ಚಿಕಿತ್ಸೆ ಮಾಡುವ ಸರ್ಜನ್ ಗಳು, ತಂತ್ರಜ್ಞರು ಮತ್ತು ಶಸ್ತ್ರ ಚಿಕಿತ್ಸೆ ಮಾಡುವ ದಾದಿಯರ ತಂಡ ಬೆಂಗಳೂರಿನಿಂದ ರಾತ್ರಿ ಸಮಯದಲ್ಲಿ ಮೃತ ವ್ಯಕ್ತಿಯ ಯಕೃತ್ ತರಲು 2022 ರ ಜುಲೈ 21 ರಂದು ಬೆಳಗಾವಿಗೆ ಪ್ರಯಾಣಿಸಿತು. 43 ವರ್ಷದ ಬೆಳಗಾವಿ ನಿವಾಸಿ ಗೋಪಾಲ ಭಜಂತ್ರಿ ಅವರು ತೀವ್ರ ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಗೆ ಧಾವಿಸಿದರು. ಈ ವರ್ಷದ ಫೆಬ್ರವರಿಯಲ್ಲಿ ಇವರು ತೀವ್ರ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವುದನ್ನು ಪತ್ತೆ ಮಾಡಲಾಗಿತ್ತು. ಇವರಿಗೆ ಹುಟ್ಟೂರಿನಲ್ಲಿ ಚಕಿತ್ಸೆ ನೀಡಲಾಗಿತ್ತು. ನಂತರ ಇವರ ಪರಿಸ್ಥಿತಿ ಮತ್ತಷ್ಟು ಗಣನೀಯವಾಗಿ ಬಿಗಡಾಯಿಸಿತು ಮತ್ತು ಇವರಿಗೆ ಗ್ರಾಸ್ ಅಸಿಟಿಸ್, ಆಳವಾದ ಜಾಂಡಿಸ್ ಮತ್ತು ಯಕೃತ್ತಿನ ಎನ್ಸೆಫಲೋಪತಿ ಸಮಸ್ಯೆ ಅಭಿವೃದ್ಧಿಯಾಯಿತು. ಯಕೃತ್ತಿನ ಸಿರೋಸಿಸ್ ನಿಂದ ಮೂತ್ರಪಿಂಡಗಳು ಎರಡನೇ ಹಂತದ ತೊಂದರೆಗೆ ಒಳಗಾದವು. ಶೀಘ್ರದಲ್ಲೇ ಯಕೃತ್ತಿನ ಕಸಿಗೆ ಒಳಗಾಗುವಂತೆ ವೈದ್ಯರು ಸಲಹೆ ಮಾಡಿದರು.
ಭಜಂತ್ರಿ ಅವರಿಗೆ ಕರ್ನಾಟಕದ ಇತರೆ ಕೇಂದ್ರಗಳಲ್ಲಿ ಕಸಿ ಮಾಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಬಿಜಿಎಸ್ ಜಿಜಿಎಚ್ ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ತಮಗೆ ಆರಾಮದಾಯಕ ಎಂದು ಮನಗಂಡು ಅವರು ಇದೇ ಆಸ್ಪತ್ರೆಗೆ ದಾಖಲಾದರು.
ಆಸ್ಪತ್ರೆಯ ಸಲಹೆಗಾರರು – ಎಚ್.ಪಿ.ಬಿ ಮತ್ತು ಕಸಿ ಶಸ್ತ್ರ ಚಿಕಿತ್ಸಕ ಡಾ. ಪ್ರಮೋದ್ ಕುಮಾರ್ ಮಾತನಾಡಿ, “ ಇವರ ಆರೋಗ್ಯ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದು ಮತ್ತು ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗೆ ರೋಗಿಯನ್ನು ಸದೃಢವಾಗಿ ಸಜ್ಜುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಇದು ಅಲ್ಲದೇ ಈತ ಆಗ ಬದುಕುಳಿಯುವ ಸಾಧ್ಯತೆಗಳು 3 ತಿಂಗಳಿಗಿಂತ ಹೆಚ್ಚಿರಲಿಲ್ಲ ಎಂದರು.
ಆಸ್ಪತ್ರೆಯ ಎಚ್.ಒ.ಡಿ ಮತ್ತು ಹಿರಿಯ ಸಲಹೆಗಾರು ಹಾಗೂ ಕಸಿ ಶಸ್ತ್ರ ಚಿಕಿತ್ಸಕರಾದ ಡಾ. ಮಹೇಶ್ ಗೋಪಶೆಟ್ಟಿ ಮಾತನಾಡಿ, “ಮತ್ತೊಂದು ಅಡ್ಡಿ ಎಂದರೆ ತನ್ನ ಕುಟುಂಬದಲ್ಲಿ ಸದೃಢ ಜೀವಂತ ಯಕೃತ್ತಿನ ದಾನಿ ಹೊಂದಿಲ್ಲದ ಕಾರಣ ಮೃತ ವ್ಯಕ್ತಿಯ ಸೂಕ್ತ ಯಕೃತ್ತು ಪಡೆಯುವವರೆಗೆ ಆತನ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿತ್ತು. ಸೂಕ್ತ ಯಕೃತ್ತು ಸಿಗುವ ಗನಕ ನಿರಂತರವಾಗಿ ಈತನ ಆರೋಗ್ಯ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿತ್ತು” ಎಂದು ಹೇಳಿದರು.
ಜುಲೈ 21 ರಂದು ಬಿಜಿಎಸ್ ಜಿಜಿಎಚ್ ನ ತಂಡ ಹತ್ತು ಗಂಟೆಗಳ ಕಾಲ ಜೀವಂತವಾಗಿರುವ ದಾನಿಯ ಯಕೃತ್ತು ಕಸಿ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಲು ಮುಂದಾದಾಗ ಭಜಂತ್ರಿ ಅವರಿಗೆ ರಾಜ್ಯದಲ್ಲಿ ಸುಸ್ಥಿರ ಮರಣ ಹೊಂದಿದ ದಾನಿ [ಶವ] ಕಸಿ ಕಾರ್ಯಕ್ರಮಕ್ಕಾಗಿ ಕರ್ನಾಟಕ ಸರ್ಕಾರ ರಚಿಸಿರುವ ಸಂಸ್ಥೆಯಾದ ಜೀವಸಾರ್ಥಕತೆಯಿಂದ ಬೆಳಗಾವಿಯಲ್ಲಿ ಬಿ+ ಶವದ ಯಕೃತ್ ಲಭ್ಯವಿರುವುದಾಗಿ ಕರೆ ಬಂತು.
ನಂತರ ತಕ್ಷಣವೇ ಶಸ್ತ್ರಚಿಕಿತ್ಸಕ ತಂಡದ ಮುಖ್ಯಸ್ಥ ಡಾ. ಪ್ರದೀಪ್ ಕೃಷ್ಣ, ಎಚ್.ಪಿ.ಬಿ ಸಮಾಲೋಚಕರು ಮತ್ತು ಕಸಿ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ನಿಡೋಣಿ, ತಾಂತ್ರಿಕ ಪರಿಣಿತರ ತಂಡ ಮತ್ತು ಒಟಿ ವಿಭಾಗದಲ್ಲಿ ಕೆಲಸ ಮಾಡುವ ದಾದಿಯರ ತಂಡವನ್ನು ರಸ್ತೆ ಮೂಲಕ ಬೆಳಗಾವಿಗೆ ಕಳುಹಿಸಲಾಯಿತು. ಬೆಳಗಾವಿಯಿಂದ ಹುಬ್ಬಳ್ಳಿಗೆ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ಸ್ಪತ್ರೆಗೆ ಹಸಿರು ಕಾರಿಡಾರ್ ನಿರ್ಮಿಸಿ ಯಕೃತ್ ಅನ್ನು ಸುರಕ್ಷಿತವಾಗಿ ತರಲಾಯಿತು.
ಯಕೃತ್ ಬಂದ ನಂತರ ಬಿಜಿಎಸ್ ಜಿಜಿಎಚ್ ಕಸಿ ಶಸ್ತ್ರಚಿಕಿತ್ಸ ಮುಖ್ಯಸ್ಥ ಡಾ. ಮಹೇಶ್ ಗೊಪಶೆಟ್ಟಿ ಕಸಿ ಶಸ್ತ್ರಚಿಕಿತ್ಸೆ ನಡೆಸಿದರು.



Join Whatsapp