ದೂಧ್ ಸಾಗರಕ್ಕೆ ಹೋಗುವ ಪ್ರಯಾಣಿಕರೇ ಎಚ್ಚರ: ಚಾರಣಿಗರನ್ನು ಬಸ್ಕಿ ಹೊಡೆಸಿದ ಪೊಲೀಸರು

Prasthutha|

ಕರ್ನಾಟಕ-ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಅದ್ಭುತ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಾಗಂತ ನೀವೇನಾದ್ರೂ ದೂಧ್ ಸಾಗರ್ ನೋಡೋಕೆ ಹೋದ್ರೋ ಬಸ್ಕಿ ಹೊಡೆಯೋಕೆ ಸಿದ್ಧರಿರಬೇಕಾಗುತ್ತದೆ. ಹೌದು, ಭಾನುವಾರ ದೂಧ್ ಸಾಗರ್ ಜಲಪಾತ ನೋಡಲು ಹೋದವರಿಗೆ ರೈಲ್ವೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟಿದ್ದಾರೆ.

- Advertisement -


ಪೊಲೀಸರು ದಂಡಿಸಿದ ವಿಡಿಯೋ ವೈರಲ್ ಆಗಿದೆ. ಜಲಪಾತವನ್ನು ನೋಡಲು ಈ ಚಾರಣಿಗರು ನಿಗದಿತ ಸ್ಥಳಕ್ಕಿಂತ ಮೊದಲೇ ರೈಲಿನಿಂದ ಇಳಿದಿದ್ದಕ್ಕಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಹಾಗಾಗಿ ಪ್ರವಾಸಿಗರು ದೂಧಸಾಗರ್ ಜಲಪಾತದ ಸೌಂದರ್ಯವನ್ನು ರೈಲಿನೊಳಗೇ ಕುಳಿತು ಆಸ್ವಾದಿಸಬೇಕು ಎಂಬ ಕಟ್ಟಾಜ್ಞೆಯನ್ನು ಪಾಲಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಪ್ರವಾಸಿಗರು ಮತ್ತು ರೈಲು ಪ್ರಯಾಣಿಕರು ಪರಸ್ಪರ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ರೈಲ್ವೇ ಕಾಯಿದೆ ಸೆಕ್ಷನ್ 147 ಮತ್ತು 159 ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಪ್ರವಾಸಿಗರು ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂದು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ.

- Advertisement -



Join Whatsapp