ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗ್ರೆ 60 ಹಾಗೂ 11ನೇ ವಾರ್ಡ್ ಗಳ ಕಾರ್ಯಕರ್ತರ , ಸದಸ್ಯರ ಹಾಗೂ ಹಿತೈಷಿಗಳ ಸ್ನೇಹ ಸಮ್ಮಿಲನ 60ನೇ ವಾರ್ಡ್ ಅಧ್ಯಕ್ಷ ಮುಝೈನ್ ಐ.ಬಿ.ಎಮ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಪ್ರಾಸ್ತಾವಿಕವಾಗಿ ರಾಜ್ಯ ಸಮಿತಿ ಸದಸ್ಯರಾದ ಅತಾವುಲ್ಲಾಹ್ ಜೋಕಟ್ಟೆಯವರು ಮಾತಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ‘ಪಕ್ಷ ಬಲವರ್ಧನೆ’ ಬಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸುಹೈಲ್ ಖಾನ್, ಉಪಾಧ್ಯಕ್ಷರಾದ ಸಿದ್ದೀಕ್ ಬೆಂಗರೆ, ಕಾರ್ಯದರ್ಶಿ ಅಲಿ ಅಕ್ಬರ್ ಮಿಲಾಯತ್, ಸಮಿತಿ ಸದಸ್ಯ ಇಂತಿಯಾಝ್ ಬೆಂಗರೆ , ಬೆಂಗರೆ 11ನೇ ವಾರ್ಡ್ ಅಧ್ಯಕ್ಷ ಅಝರ್ , ಪಕ್ಷದ ವಾರ್ಡ್ ಮತ್ತು ಬೂತ್ ನಾಯಕರು , ಕಾರ್ಯಕರ್ತರು, ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.