ಬೆಂಗಳೂರು: ಚರಂಡಿಗೆ ಬಿದ್ದು ಯುವತಿ ಮೃತ್ಯು

Prasthutha|

ಬೆಂಗಳೂರು: ಯುವತಿಯೋರ್ವಳು ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ನ ಅಶ್ವಥ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

- Advertisement -

ತಾರಾ ಬಡಾಯಿಕ್ (23) ಸಾವನ್ನಪ್ಪಿದ ಯುವತಿ ಎಂದು ಗುರುತಿಸಲಾಗಿದೆ.
ತಾರಾ ರಾತ್ರಿ 12.30 ರ ಸುಮಾರಿಗೆ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದಿದ್ದಾಳೆ.
ಚರಂಡಿಗೆ ಬಿದ್ದ ಪರಿಣಾಮ ಯುವತಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp