ಬೆಂಗಳೂರು: ಜನಿಸಿದ ಮಗು ಹೆಣ್ಣೆಂದು ತಿಳಿದು ಚರಂಡಿಗೆ ಬಿಸಾಡಿ ಹೋದ ಹೆತ್ತವರು!

Prasthutha|

ಬೆಂಗಳೂರು: ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ನಂತರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿಕೊಂಡು ಹೋದ ಹೆತ್ತವರು ಮಗುವನ್ನು ಚರಂಡಿಯಲ್ಲಿ ಬೀಸಾಡಿ ಹೋಗಿರುವ ಕ್ರೂರ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.

- Advertisement -

ಆನೇಕಲ್ ಬಳಿಯ ಚರಂಡಿ ಒಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗುವಿನ ಅಳುವ ಶಬ್ದ ಕೇಳಿದ ದಾರಿಹೋಕರು ಚರಂಡಿ ಬಳಿ ಹೋಗಿ ನೋಡಿದಾಗ ನವಜಾತ ಹೆಣ್ಣು ಶಿಶು ಕಂಡಿದೆ. ಕವರ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಗು ಇತ್ತು. ಆಗತಾನೆ ಹುಟ್ಟಿದ ಮಗುವನ್ನು ಚರಂಡಿ ಮಧ್ಯೆ ಪಾಪಿಗಳು ಎಸೆದು ಹೋಗಿದ್ದಾರೆ ಎಂದು ತಿಳಿದ ಜನರು ಶಿಶುವನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಇನ್ನು ಮಗು ಬೀಸಾಡಿದ್ದ ವಸ್ತ್ರದಲ್ಲಿ ಆಸ್ಪತ್ರೆಯ ರಶೀದಿ ಪತ್ತೆಯಾಗಿದ್ದು, ಆಸ್ಪತ್ರೆ, ಹೆತ್ತವರ ಹೆಸರು ತಿಳಿದು ಬಂದಿದೆ.

ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ತಾಯಿ ಹೆಸರು ಸುಪ್ರಿಯಾ, ತಂದೆ ಹೆಸರು ಶಶಿಧರ್ ಎಂದು ತಿಳಿದು ಬಂದಿದೆ. ಇಬ್ಬರೂ ಜಿಗಣಿ ನಿವಾಸಿಗಳು ಎಂಬುವುದೂ ರಶೀದಿಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು, ಮಗುವಿನ ಪಾಪಿ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Join Whatsapp