ಬೆಂಗಳೂರು: ಚಿಕ್ಕಮ್ಮನನ್ನು ಬರ್ಬರವಾಗಿ ಕೊಲೆ ಮಾಡಿದ ಮಗ

Prasthutha|

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಮರ್ಡರ್‌ ಆಗಿದ್ದು, ಚಿಕ್ಕಮ್ಮನನ್ನು ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.

- Advertisement -

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದೊಮ್ಮಸಂದ್ರ ನಿವಾಸಿ ಚಂದ್ರಮ್ಮ (45) ಹತ್ಯೆಯಾದ ಮಹಿಳೆ. ವೆಂಕಟೇಶ್‌ ಕೊಲೆ ಆರೋಪಿಯಾಗಿದ್ದು, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ದೇವಸ್ಥಾನದಿಂದ ಮನೆಗೆ ವಾಪಸ್‌ ಬರುವಾಗಿ ನಡುರಸೆಯಲ್ಲಿ ಚಿಕ್ಕಮ್ಮಳ ಜತೆಗೆ ಜಗಳ ತೆಗೆದ ವೆಂಕಟೇಶ್‌ ಬಳಿಕ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಮ್ಮ ಸಾವನ್ನಪ್ಪಿದಾರೆ.

Join Whatsapp