ಬೆಂಗಳೂರು: ಪ್ಯಾಲೆಸ್ತೀನ್‌‌ ನಾಗರಿಕರ ಹತ್ಯೆ ಖಂಡಿಸಿ ಪ್ರತಿಭಟನೆ

Prasthutha|

ಬೆಂಗಳೂರು: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ನಾಗರಿಕರ ಹತ್ಯಾಕಾಂಡವನ್ನು ಖಂಡಿಸಿ ಫ್ರೀಡಂಪಾರ್ಕ್‌ನಲ್ಲಿ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುವ ಹತ್ಯಾಕಾಂಡ ನಿಲ್ಲಬೇಕು. ಭಾರತವು ಪ್ಯಾಲೆಸ್ತೀನ್ ಪರವಾಗಿ, ಪ್ಯಾಲೆಸ್ತೀನಿಯರ ಉಳಿವಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

- Advertisement -

ಇಸ್ರೇಲ್ ನಡೆಸುವ ಅಮಾಯಕರ ಹತ್ಯೆಗಳನ್ನು ಇಸ್ರೇಲ್‌ನ ಪ್ರಜ್ಞಾವಂತ ನಾಗರಿಕರು ಕೂಡ ಖಂಡಿಸುತ್ತಿದ್ದಾರೆ. ಪ್ಯಾಲೆಸ್ತೀನ್ ವಿರುದ್ಧದ ಇಸ್ರೇಲ್ ನೀತಿಯನ್ನು ಖಂಡಿಸಿದ್ದಾರೆ. ಹೀಗಿರುವಾಗ ಇಡೀ ಜಗತ್ತು ಪ್ಯಾಲೆಸ್ತೀನಿಯರ ಪರ ನಿಲ್ಲಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

75 ವರ್ಷಗಳಲ್ಲಿ ಇಸ್ರೇಲ್‌ ಪ್ಯಾಲೆಸ್ತೀನಿಯರನ್ನು ಹತ್ಯಾಕಾಂಡ ನಡೆಸುತ್ತಾ ಬಂದಿದೆ. ಪ್ಯಾಲೆಸ್ತೀನ್ ಭೂ ಭಾಗವನ್ನು ಆಕ್ರಮಿಸಿಕೊಂಡಿದೆ. ಇಸ್ರೇಲ್‌ ನೀತಿಯನ್ನು ಹಲವಾರು ರಾಷ್ಟ್ರಗಳು ವಿರೋಧಿಸಿವೆ. ಭಾರತದಲ್ಲಿ ಈವರೆಗಿನ ಎಲ್ಲಾ ಸರಕಾರಗಳು ಪ್ಯಾಲೆಸ್ತೀನ್‌ ನಾಗರಿಕರ ಪರವಾಗಿ ತಮ್ಮ ನಿಲುವನ್ನು ಮಂಡಿಸಿದ್ದರು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾತ್ರ ಪ್ಯಾಲೆಸ್ತೀನಿ ಪರ ನಿಲುವು ಮಂಡಿಸದೆ ತಟಸ್ಥವಾಗಿ ಉಳಿದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಪ್ಯಾಲೆಸ್ತೀನಿ ಪರ ಪ್ರತಿಭಟನೆಗಳಿಗೆ ಅವಕಾಶ ಕೊಡದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಧೋರಣೆಯ ವಿರುದ್ಧ ಕೂಡ ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಧೋರಣೆಗಳನ್ನು ಜನರ ಮೇಲೆ ಹೇರುತ್ತಿವೆ. ಪೊಲೀಸರು ಸಂವಿಧಾನದಿಂದ ಆಯ್ಕೆಯಾದವರು. ಅವರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಮನ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಚುನಾವಣೆಗೂ ಮುನ್ನ ಸಾಕಷ್ಟು ಮಾತನಾಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ರಾಜಕಾರಣಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಡೆಗಣಿಸುತ್ತಿದೆ ಎಂದು ಹೇಳಿದ್ದಾರೆ.



Join Whatsapp