ಟ್ರಾಫಿಕ್ ನಿಂದಾಗಿ ಬೆಂಗಳೂರಿಗೆ ವಾರ್ಷಿಕ 20 ಸಾವಿರ ಕೋಟಿ ರೂ. ನಷ್ಟ!

Prasthutha|

ಬೆಂಗಳೂರು: ಟ್ರಾಫಿಕ್ ಜಾಮ್ ನಿಂದ ವಾರ್ಷಿಕ 19,725 ಕೋಟಿ ರೂ. ನಷ್ಟವನ್ನು ಬೆಂಗಳೂರು ಅನುಭವಿಸುತ್ತಿದೆ. ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್ ಗಳಲ್ಲಿ ನಿಲ್ಲುವುದು, ಸಮಯದ ನಷ್ಟ ಸೇರಿ ಇತರೆ ಅಂಶಗಳಿಂದ ಬೆಂಗಳೂರು ಸುಮಾರು 20 ಸಾವಿರ ಕೋಟಿ ರೂಪಾಯಿಯನ್ನು ವಾರ್ಷಿಕವಾಗಿ ಕಳೆದುಕೊಳ್ಳುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ತಿಳಿಸಿದೆ.

- Advertisement -


ಟ್ರಾಫಿಕ್ ವಿಳಂಬ, ದಟ್ಟಣೆ, ಸಿಗ್ನಲ್ ಗಳಲ್ಲಿ ನಿಲುಗಡೆ, ಸಮಯ ವ್ಯರ್ಥ, ಇಂಧನ ವ್ಯರ್ಥ ಮತ್ತು ಟ್ರಾಫಿಕ್ಗೆ ಸೇರಿದಂತೆ ಇತರ ಎಲ್ಲ ಅಂಶಗಳಿಂದಾಗಿ ಬೆಂಗಳೂರಿಗೆ ಭಾರಿ ನಷ್ಟವಾಗಿದೆ. ಸುಗಮ ಸಾರಿಗೆಗೆ ಸಂಬಂಧಿಸಿದಂತೆ ಹಲವಾರು ಸರ್ಕಾರಗಳು ಮತ್ತು ಸ್ಮಾರ್ಟ್ ಸಿಟಿಗಳ ಸಲಹೆಗಾರರೂ ಆಗಿರುವ ಶ್ರೀಹರಿ ಅವರು ಸಂಚಾರ ನಿರ್ವಹಣೆ, ರಸ್ತೆ ಯೋಜನೆ ಮೇಲ್ಸೇತುವೆಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಶಿಫಾರಸುಗಳ ವರದಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ.


ಬೆಂಗಳೂರಿನಲ್ಲಿ ಐಟಿ ಉದ್ಯಮ ಬೆಳವಣಿಗೆ ಸಾಧಿಸಿರುವುದರಿಂದ ಅಭಿವೃದ್ಧಿ ಸಂಬಂಧಿತ ಅಂಶಗಳಾದ ವಸತಿ, ಶಿಕ್ಷಣ ಮತ್ತಿತರ ಸೌಲಭ್ಯಗಳ ಅಭಿವೃದ್ಧಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ. 1.45 ಕೋಟಿ ಜನಸಂಖ್ಯೆ ಇರುವ ಬೆಂಗಳೂರಲ್ಲಿ 1.5 ಕೋಟಿಗೂ ಹೆಚ್ಚು ವಾಹನಗಳು ಇರುವುದು ಕೂಡ ದಟ್ಟಣೆಗೆ ಕಾರಣವಾಗಿದೆ. 2023ರಲ್ಲಿ ಬೆಂಗಳೂರು 88 ಚದರ ಕಿಲೋ ಮೀಟರ್ಗಿಂತ 985 ಚದರ ಕಿಲೋ ಮೀಟರ್ಗೆ ವಿಸ್ತರಣೆಯಾಗಿದೆ. ಈ ವಿಸ್ತರಣೆ 1,100 ಚದರ ಕಿಮೀ ಆಗಬೇಕು ಎಂದು ಅಧ್ಯಯನ ತಿಳಿಸಿದೆ.



Join Whatsapp