ಬೆಂಗಳೂರು: ಇನ್ ಸ್ಟಾಗ್ರಾಮ್ ಸ್ಟಾರ್ ‘ಯೂನಿಸ್ ಝರೂರಾ’ ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು: ಇನ್ ಸ್ಟಾಗ್ರಾಮ್ ಸ್ಟಾರ್ ಯೂನಿಸ್ ಝರೂರಾ ರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ಇವರು ಬೇರೆ ಬೇರೆ ದೇಶಗಳಿಗೆ ತೆರಳಿ ಸರ್ಪ್ರೈಸ್ ಗಿಫ್ಟ್ ಗಳನ್ನ ಕೊಡುತ್ತಿದ್ದರು. ಅದರಂತೆ ಯೂನಿಸ್ ಬೆಂಗಳೂರಿನ ಎಂಜಿ ರಸ್ತೆಗೂ ಬಂದಿದ್ದರು. ಸರಿಯಾದ ಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್ ನನ್ನು ಗಿಫ್ಟ್ ಕೊಡುತ್ತಿದ್ದರು. ಅಷ್ಟೇ ಅಲ್ಲದೆ ಎಂಜಿ ರಸ್ತೆಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದರು.


ಯಾಕೆ ಬಂಧನ?
ಇವರು ಬಂದ ವಿಚಾರ ತಿಳಿದು ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು ಸೇರಿದ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅನುಮತಿ ಪಡೆಯದೆ ಜನರನ್ನು ಗುಂಪು ಸೇರಿಸಿದ್ದ ಹಿನ್ನೆಲೆ ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಯ್ಸಳ ವಾಹನದ ಒಳಗೆ ಕೂಡ ವೀಡಿಯೋ ಮಾಡಿದ್ದ ಇತ, ಸ್ಟೇಷನ್ ಒಳಗೆ ಫೋಟೋ ಹಾಕಿ ತೊಂದರೆಯಲ್ಲಿದ್ದೀನಿ ಎಂದು ಮೆಸೇಜ್ ಕಳಿಸಿದ್ದರು. ಸದ್ಯ ವಾರ್ನ್ ಮಾಡಿ ಪೊಲೀಸರು ಬಿಟ್ಟು ಕಳಿಸಿದ್ದಾರೆ.



Join Whatsapp