ಬೆಂಗಳೂರು: ಹೆಂಡತಿ ಮುಖಕ್ಕೆ ಆಸಿಡ್ ಎರಚಿ ಪರಾರಿ ಆದ ಗಂಡ

Prasthutha|

ಬೆಂಗಳೂರು: ಮನೆಯಲ್ಲಿ ಪ್ರತಿನಿತ್ಯ ಹೆಂಡತಿ ಗಲಾಟೆ ಮಾಡುತ್ತಾಳೆ ಎಂದು ಆಕೆ ಮಲಗಿರುವಾಗ ಮುಖಕ್ಕೆ ಆಸಿಡ್ ಎರಚಿ ಗಂಡ ಪರಾರಿ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡದಿದೆ.

- Advertisement -

ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಡ ಚಾಂದ್ ಪಾಷಾ ಎಂಬಾತನಿಂದ ಕೃತ್ಯ ನಡೆದಿದೆ. ಹೆಂಡತಿ ನಾಜಿಯಾ ಬೇಗಂ ಸಂತ್ರಸ್ತೆ ಮಹಿಳೆಯಾಗಿದ್ದಾಳೆ.

ಆರೋಪಿ ಚಾಂದ್‌ಪಾಷಾ ಎರಚಿದ ಆಸಿಡ್‌ ಶೌಚಾಲಯ ಸ್ವಚ್ಛಗೊಳಿಸುವ ಕಡಿಮೆ ಪವರ್ ಇರುವ ದುರ್ಬಲ ಆಸಿಡ್‌ ಆಗಿದೆ. ಆದ್ದರಿಂದ ನಾಜಿಯಾ ಬೇಗಂಗೆ ಆಸಿಡ್‌ ಎರಚಿದಾಗ ಸ್ವಲ್ಪ ಉರಿ ಕಾಣಿಸಿಕೊಂಡಿದ್ದು, ಮುಖದ ಚರ್ಮ ಸ್ವಲ್ಪ ಸುಟ್ಟಂತಾಗಿದೆ. ಆದರೆ, ಮಾಂಸದ ಸಮೇತ ಚರ್ಮ ಸುಟ್ಟು ಹೋಗುವಂತಹ ಗಂಭೀರ ಗಾಯವಾಗಿಲ್ಲ.

- Advertisement -

ಮಹಿಳೆಯನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಕುರಿತಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.



Join Whatsapp