ಬೆಂಗಳೂರು : ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮೃತಪಟ್ಟು, 4 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆ ಬೆಂಗಳೂರಿನ ಸದಾಶಿವನಗರದ ಅಶ್ವಥ್ ನಗರದಲ್ಲಿ ನಡೆದಿದೆ.
ರಮ್ಯಾ (23) ಮೃತ ಮಹಿಳೆ. ರಮ್ಯಾ ತನ್ನ ಮಗುವಿಗೆ ಸ್ನಾನ ಮಾಡಿಸುವಾಗ ಗ್ಯಾಸ್ ಗೀಸರ್ (ಕಾರ್ಬನ್ ಮೋನಾಕ್ಸೈಡ್) ಸೋರಿಕೆಯಾಗಿದೆ.
ಕಿಟಕಿ ಬಾಗಿಲು ಮುಚ್ಚಿದ್ದರಿಂದ, ಹೊರಗಡೆಯಿಂದ ಗಾಳಿ ಬಾರದೇ ಇದ್ದರಿಂದ ತಾಯಿ- ಮಗು ಅಸ್ವಸ್ಥಗೊಂಡಿದ್ದರು. ಕೂಡಲೇ ಇಬ್ಬರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ತಾಯಿ ರಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.