ಬೆಂಗಳೂರಿನಲ್ಲಿ ಪಟಾಕಿ ಅವಘಡ: ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆ

Prasthutha|

ಬೆಂಗಳೂರು: ಪಟಾಕಿ ಸಂಬಂಧಿತ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಪೈಕಿ ಸರ್ಕಾರಿ ಆಸ್ಪತ್ರಗೆ 17 ಜನ ದಾಖಲಾಗಿದ್ದರೆ, 26 ಜನ ಖಾಸಗಿ ಆಸ್ಪತ್ರೆ ಬಾಗಿಲು ತಟ್ಟಿದ್ದಾರೆ.

- Advertisement -


ದೀಪಾವಳಿಯ ಮೊದಲ ದಿನ ಅಂದರೆ ನರಕ ಚತುರ್ದಶಿಯಂದು (ನವೆಂಬರ್ 12) ಮಕ್ಕಳು ಸೇರಿದಂತೆ 26 ಜನರು ಗಾಯಗೊಂಡಿದ್ದರು. ಇದೀಗ ದೀಪಾವಳಿ 2ನೇ ದಿನ ಅಮಾವಸ್ಯೆಯಂದು (ನವೆಂಬರ್ 13) ಗಾಯಗೊಂಡವರ ಸಂಖ್ಯೆ 26ರಿಂದ 43ಕ್ಕೆ ಏರಿಕೆಯಾಗಿದೆ.



Join Whatsapp