ಬೆಂಗಳೂರು: ಶಿವಾಜಿ ಮೂರ್ತಿಗೆ ಮಸಿ ಬಳಿದವರ ವಿರುದ್ಧ ಗೂಂಡ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ; ಬೊಮ್ಮಾಯಿ

Prasthutha|

ಬೆಳಗಾವಿ: ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ ಅವರ ಹಿಂದೆ ಯಾರ್ ಇದ್ದಾರೆ ಎನ್ನುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.

- Advertisement -

ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದಂತ ಅವರು, ಮಹಾರಾಷ್ಟ್ರದ ಜತ್ ತಾಲೂಕು, ಬಹಳ ಬರಗಾಲಪೀಡಿತ ತಾಲೂಕಾಗಿದೆ. ಕನ್ನಡಿಗರು ಇರುವಂತ ತಾಲೂಕಾಗಿದೆ. ಈ ತಾಲೂಕಿನ 40 ಗ್ರಾಮ ಪಂಚಾಯ್ತಿಗಳು ಕರ್ನಾಟಕಕ್ಕೆ ಸೇರಿಸುವಂತೆ ರೆಸಲ್ಯೂಷನ್ ಮಾಡಿವೆ. ಇದ್ಯಾವುದನ್ನು ಲೆಕ್ಕಿಸದೇ ಕೆಲವರು ಒಂದಿಲ್ಲ ಒಂದು ರೀತಿಯಲ್ಲಿ ಬೆಳಗಾವಿಯನ್ನು ಟಾರ್ಗೆಟ್ ಮಾಡಿಕೊಂಡು ಕ್ಷೋಭೆ ಉಂಟು ಮಾಡುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಇನ್ನು ಈ ರೀತಿ ಕೆಲಸ ಮಾಡಿದ ಪುಂಡರಿಗೆ ಬೆಳಗಾವಿಯನ್ನು ಕ್ಷೋಭೆ ತರುತ್ತಿರೋ ಬಗ್ಗೆ ಇತಿಶ್ರೀ ಹಾಡಬೇಕು ಅಂದರೆ, ಎಲ್ಲರೂ ಕೂಡಿ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕಿದೆ” ಎಂದಿದ್ದಾರೆ.

Join Whatsapp