ಬೆಂಗಳೂರು ಬಂದ್ ಶಾಂತಿಯುತವಾಗಿ ಆಗಿದೆ, ನಾಗರಿಕರಿಗೆ ಅಭಿನಂದನೆ: ಡಿಕೆಶಿ

Prasthutha|

ಬೆಂಗಳೂರು: ಬೆಂಗಳೂರು ಬಂದ್ ಶಾಂತಿಯುತವಾಗಿ ಆಗಿದೆ. ನಾಗರಿಕರಿಗೆ ನನ್ನ ಅಭಿನಂದನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಕರ್ನಾಟಕದಲ್ಲಿ ಬರ ಇದ್ದಾಗಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಪ್ರತಿಭಟನೆ ಮಾಡಲಿ. ಅವರ ಧ್ವನಿ, ಹೋರಾಟ ನಡೆಯಲಿ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಸಂಘಟನೆಯವರಿಗೆ ಅಭಿನಂದನೆಗಳು ಎಂದರು.ಕಾವೇರಿ ನಿರ್ವಹಣಾ ಸಮಿತಿ ಸಭೆ ನಡೆಯುತ್ತಿದೆ. ಕಾವೇರಿ ಒಳಹರಿವು ಜಾಸ್ತಿ ಆಗಿದೆ. ಪ್ರಸ್ತುತ 10,000 ಕ್ಯೂಸೆಕ್ ನೀರು ಒಳಹರಿವಿದೆ. ರಾಜ್ಯದ ಹಿತಕ್ಕೆ ನಾವು ಕೆಲಸ ಮಾಡುತ್ತೇವೆ ಎಂದರು.

ಅವರು 12,500 ಕ್ಯೂಸೆಕ್ ನೀರು ಕೇಳಿದ ತಕ್ಷಣ ಕೊಡಲು ಆಗಲ್ಲ. ಅದಕ್ಕೆ ಲೆಕ್ಕಾಚಾರ ಇದೆ. 5,000 ಕ್ಯೂಸೆಕ್ ನೀರು ಬಿಡಲು ಕಷ್ಟವಾಗುತ್ತಿದೆ. 12,500 ಕ್ಯೂಸೆಕ್ ನೀರು ಕೇಳಿದರೆ ಆಗಲ್ಲ. ನಮ್ಮ ಅಫಿಡವಿಟ್ ನಾವು ಹಾಕುತ್ತೇವೆ. ತಾಂತ್ರಿಕ ಸಮಿತಿ ಅದನ್ನು ಮಾಡುತ್ತದೆ ಎಂದು ತಿಳಿಸಿದರು.