ಬೆಂಗಳೂರು: ಲಾಲ್ ಬಾಗ್ ಬಳಿಕ ‘ಬಾಲ ಭವನ’ ಪ್ರವೇಶ ಶುಲ್ಕ ಏರಿಸಲು ಚಿಂತನೆ

Prasthutha|

ಬೆಂಗಳೂರು: ಕಬ್ಬನ್ ಪಾರ್ಕ್ ಗೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಅದರಲ್ಲಂತೂ ವಾರಾಂತ್ಯದಲ್ಲಿ ಸಾವಿರಾರು ಜನರು ಭೇಟಿ ನೀಡಿ, ಪ್ರಕೃತಿಯ ಅಂದವನ್ನು ಆನಂದಿಸುತ್ತಾರೆ. ಕಬ್ಬನ್ ಪಾರ್ಕ್ ನಲ್ಲಿರುವ ಬಾಲ ಭವನ ಪ್ರವೇಶ ಶುಲ್ಕ ಹೆಚ್ಚಳಕ್ಕೆ ತೆರೆಮರೆಯಲ್ಲಿ ಸಿದ್ದತೆ ನಡೆಯುತ್ತಿದೆ.

- Advertisement -


ಕಳೆದ ಹಲವು ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಹೀಗಾಗಿ, ಈ ವರ್ಷ ಟಿಕೆಟ್ ದರ ಏರಿಸಲು ಬಾಲ ಭವನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.


ಬಾಲ ಭವನ ಪ್ರವೇಶಕ್ಕೆ ಮಕ್ಕಳಿಗೆ 20 ರೂ. ವಯಸ್ಕರಿಗೆ 30 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದೀಗ, ವಯಸ್ಕರಿಗೆ 10 ರಿಂದ 20 ರುಪಾಯಿ ಏರಿಕೆ ಮಾಡಲು ಚಿಂತನೆ ನಡೆದಿದೆ.

- Advertisement -


ಬಾಲ ಭವನದಲ್ಲಿ ಮಕ್ಕಳಿಗೆಂದೇ ವಿಶೇಷ ಆಟಿಕೆ ವಸ್ತುಗಳಿವೆ. ಈ ಆಟಿಕೆಯ ವಸ್ತುಗಳ ನಿರ್ಹವಣೆಯ ಸಲುವಾಗಿ ಟಿಕಟ್ ದರ ಏರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದರಲ್ಲೇ ರಾಜ್ಯದ ಎಲ್ಲ ಬಾಲ ಭವನಗಳ ಪ್ರವೇಶ ಶುಲ್ಕ ಏರಿಕೆಯಾಗುವ ಸಾಧ್ಯತೆ ಇದೆ.


ಈಗಾಗಲೇ ಲಾಲ್ ಬಾಗ್ ಒಳಗೆ ಪ್ರವೇಶ ಶುಲ್ಕ ಜಾಸ್ತಿ ಮಾಡಲಾಗಿದೆ. ಇದೀಗ ಬಾಲ ಭವನ ಪ್ರವೇಶ ಶುಲ್ಕ ಏರಿಸಲು ಮುಂದಾಗುತ್ತಿರುವುದು ಸರಿಯಲ್ಲ. ಸರ್ಕಾರ ಈಗಾಗಲೇ ಎಲ್ಲ ಬೆಲೆ ಏರಿಕೆ ಮಾಡಿ ಹಣ ಹೊಡೆಯುತ್ತಿದೆ. ಪ್ರವೇಶ ಶುಲ್ಕ ಕಡಿಮೆ ಮಾಡಿದರೆ ಪರವಾಗಿಲ್ಲ. ಆದರೆ, ಜಾಸ್ತಿ ಮಾಡಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಕಬ್ಬನ್ ಪಾರ್ಕ್ ವಾಕರ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.



Join Whatsapp