ಬೆಂಗಳೂರು:19ನೇ ಮಹಡಿಯಿಂದ ಜಿಗಿದ ಯುವಕ ಮೃತ್ಯು

Prasthutha|

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರತಿಷ್ಠಿತ ಖಾಸಗಿ ಹೋಟೆಲ್​‌ನ 19ನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

- Advertisement -

ಮಾಧವ್ ನಗರದಲ್ಲಿರುವ ಖಾಸಗಿ ಹೋಟೆಲ್​ಗೆ ನಿನ್ನೆ ಬಂದು ರೂಂ ಮಾಡಿಕೊಂಡು ತಂಗಿದ್ದ ತಮಿಳುನಾಡು ಮೂಲದ ಶರಣ್ (28) ಇಂದು 19ನೇ ಮಹಡಿಯಿಂದ ಜಿಗಿದಿದ್ದಾನೆ. ಸ್ಥಳದಲ್ಲೇ ಆತನ ಪ್ರಾಣ ಹೋಗಿದೆ.

ಈ ಹಿಂದೆಯೂ ಶರಣ್ ಇದೇ ಹೋಟೆಲ್​ನಲ್ಲಿ ಉಳಿದುಕೊಂಡಿದ್ದನು ಎಂದು ಸಿಬ್ಬಂದಿ ತಿಳಿಸಿದ್ದಾರೆ.

- Advertisement -

ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿದ್ದು, ಹೋಟೆಲ್​ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.



Join Whatsapp