ಬೆಂಗಳೂರು: ಮನೆಯಲ್ಲಿದ್ದ ಮಹಿಳೆ ಬೆತ್ತಲೆ ಶವವಾಗಿ ಪತ್ತೆ

Prasthutha|

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮನೆಯಲ್ಲಿದ್ದ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

- Advertisement -

ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟನಲ್ಲಿ ಘಟನೆ ನಡೆದಿದೆ.ಕೊಲೆಯಾದ ಮಹಿಳೆಯನ್ನು ಶೋಭಾ ಎಂದು ಗುರುತಿಸಲಾಗಿದೆ.

ಶೋಭಾ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದದ್ದ ಶೋಭಾ,ಭದ್ರಪ್ಪ ಲೇಔಟ್ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದರು. ಮನೆಯಲ್ಲಿ ಆಗಾಗ್ಗೆ ಒಬ್ಬರೇ ಇರುತ್ತಿದ್ದರು.

- Advertisement -

ಶೋಭಾರ ಮಗಳೋರ್ವರು ಗಂಡನ ಮನೆಯಿಂದ ಅಮ್ಮ ಶೋಭಾಗೆ ಕರೆ ಮಾಡಿದ್ದಾಳೆ. ಎಷ್ಟೇ ಸಾರಿ ಕರೆ ಮಾಡಿದರೂ ಫೋನ್ ಸ್ವೀಕರಿದಲಿಲ್ಲ.

ತಾಯಿ ಕರೆ ಸ್ವೀಕರದ ಹಿನ್ನೆಲೆಯಲ್ಲಿ ಮಗಳು ಮನೆಗೆ ಬಂದು ನೋಡಿದ್ದಾಳೆ. ಆಗ ತಾಯಿ ಬೆತ್ತಲೆಯಾಗಿ ಶವವಾಗುರುವುದು ಕಂಡುಬಂದಿದೆ.

ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.



Join Whatsapp