ಬೆಂಗಳೂರು: ಪಟಾಕಿ ಸಿಡಿಯುವಾಗ 20 ಮಂದಿಗೆ ಗಾಯ

Prasthutha|

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಗೆ 20 ಮಂದಿ ಗಾಯಗೊಂಡಿದ್ದಾರೆ.

- Advertisement -

ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಗೊಳದಾವರು ಮಿಂಟೋ, ನಾರಾಯಣ ನೇತ್ರಾಲಯ, ನೇತ್ರಧಾಮ ಇನ್ನಿತರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸುಟ್ಟ ಗಾಯಗಳಾದವರು ವಿಕ್ಟೋರಿಯಾ ಇನ್ನಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪಾವಳಿಗೆ ಇನ್ನೂ ಎರಡು ದಿನಗಳಿರುವಾಗಲೇ ಪಟಾಕಿಯಿಂದ ಗಾಯಗೊಂಡಿರುವ ಸಂಖ್ಯೆ 20 ಕ್ಕೇರಿದೆ.

- Advertisement -

ಮೊದಲ ದಿನವೇ ಕಲಾಸಿಪಾಳ್ಯದ ನಿವಾಸಿ ಸುರೇಶ್(35) ಗಾಯಗೊಂಡಿದ್ದರು. ಅ.23ರಂದು ಮೂವರು ಗಾಯಗೊಂಡಿದ್ದರು. ನಿನ್ನೆ ಮತ್ತೆ 11 ಮಂದಿ ಗಾಯಗೊಂಡಿರುವುದರಿಂದ ಒಟ್ಟು ಗಾಯಾಳುಗಳ ಸಂಖ್ಯೆ 20ಕ್ಕೇರಿದೆ. ಪಟಾಕಿ ಸ್ಫೋಟದಿಂದ ಗಾಯಗೊಂಡು  ಇದುವರೆಗೆ 12ಕ್ಕೂ  ಮಂದಿ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಿಂಟೋ ಆಸ್ಪತ್ರೆಗೆ ನಿನ್ನೆ ರಾತ್ರಿಯಿಂದ 7 ಮಂದಿ ಕಣ್ಣಿಗೆ ಹಾನಿಗೊಂಡವರು ಚಿಕಿತ್ಸೆ ಪಡೆದಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್ ತಿಳಿಸಿದ್ದಾರೆ.

ಅ.24ರಂದು ಶ್ರೀ ನಗರದ ಮದನ್ ಎನ್ನುವ 18 ವರ್ಷದ ಯುವಕ, ಮಧ್ಯಾಹ್ನದ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪಟಾಕಿ ಕಿಡಿಯೊಂದು ಬಲಗಣ್ಣಿಗೆ ತಾಗಿ ಗಂಭೀರ ಗಾಯವಾಗಿತ್ತು. ಅ.23ರಂದು  ಒಂದೇ ದಿನ ನಾಲ್ಕು ಜನರು ಪಟಾಕಿ ಸಿಡಿತದಿಂದ ಗಾಯಗೊಂಡು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದರು.

ರಾತ್ರಿಯಿಂದ ಚಾಮರಾಜಪೇಟೆಯ ಭುವನ್ (10) ಹೂ ಕುಂಡದಿಂದ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರೆ, ಬಿಜಲಿ ಪಟಾಕಿಯಿಂದ 59 ವರ್ಷದ ರಮೇಶ್, ಮೈಸೂರು ರಸ್ತೆಯ ಜಯಸಿಂಹ (19), ಲಕ್ಷ್ಮಿ, ಎನ್ ಜಿಎಫ್ ಲೇಔಟ್ ನ ಸುರಭಿ(4), ಸರ್ಜಾಪುರ ರಸ್ತೆಯ ಸಂಗೀತ ವರ್ಮಾ(49), ಅವೆನ್ಯೂ ರಸ್ತೆಯ ಅಬ್ದುಲ್ಲಾ (19) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಜಾತ ರಾಥೋಡ್ ತಿಳಿಸಿದರು.

ಅನ್ನಪೂರ್ಣೇಶ್ವರಿನಗರದ ಮಮತ (39) ಕೆಪಿ ಅಗ್ರಹಾರದ ಅರ್ಜುನ್ (19) ಬಿಜಲಿ ಪಟಾಕಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನ ಮಂದಿಗೆ ಕಣ್ಣಿನ ದೃಷ್ಟಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದರು.

ಇದೇ ವೇಳೆ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆಗೆ ದಾಖಲಾಗಿದ್ದು, ಇವರಲ್ಲಿ ಆಂಧ್ರ ಪ್ರದೇಶದ ಆನಂದಪುರಂನ 27 ರ ಯುವಕನಿಗೆ ಗಂಭೀರ ಗಾಯಗಳಾಗಿವೆ. ಇನ್ನುಳಿದ ಇಬ್ಬರಿಗೆ ಸಾಮಾನ್ಯ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

45 ಮಂದಿಗೆ ಗಾಯ

ಕಳೆದ ವರ್ಷ(2021) ದೀಪಾವಳಿಗೆ ನಗರದಾದ್ಯಂತ 45ಕ್ಕೂ ಹೆಚ್ಚು ಮಂದಿ ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆಗೆ ಗಂಭೀರ ಗಾಯವಾಗಿತ್ತು. ಕೆಲವರು ತಾವೇ ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡರೆ, ಇನ್ನೂ ಕೆಲವರು ಬೇರೆಯವರು ಪಟಾಕಿ ಸಿಡಿಸುತ್ತಿರುವಾಗ ಕಿಡಿ ತಾಗಿ ಕಣ್ಣಿಗೆ ಹಾನಿಯಾಗಿತ್ತು. ಕಳೆದ ವರ್ಷ ನಗರದಲ್ಲಿ ಮೂವರು ಪಟಾಕಿಯಿಂದ ಕಣ್ಣು ಕಳೆದುಕೊಂಡಿದ್ದರು. ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 16 ಮಕ್ಕಳೂ ಸೇರಿದಂತೆ ಒಟ್ಟು 23 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು.

ಜಯನಗರದ ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿಇಬ್ಬರು ಯುವಕರು ದಾಖಲಾಗಿದ್ದು, ದೊಡ್ಡ ಪ್ರಮಾಣದ ಹಾನಿಯಾಗಿಲ್ಲಎಂದು ವೈದ್ಯರು ತಿಳಿಸಿದ್ದಾರೆ. ಅಗರ್ವಾಲ್ ಆಸ್ಪತ್ರೆಯಲ್ಲಿಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.



Join Whatsapp