ಬಂಗಾಳ ಉಪಚುನಾವಣೆ: ಟಿಎಂಸಿಯ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೊ ಮುನ್ನಡೆ

Prasthutha|

ಕೋಲ್ಕತ್ತಾ: ಅಸನ್ಸೋಲ್ ಲೋಕಸಭಾ ಮತ್ತು ಬ್ಯಾಲಿಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಮಂಗಳವಾರ ನಡೆದ ಉಪಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉಭಯ ಕ್ಷೇತ್ರಗಳಲ್ಲೂ  ಟಿಎಂಸಿ ಅಭ್ಯರ್ಥಿಗಳು ಮುನ್ನಡೆಯಲಿದ್ದಾರೆ.

- Advertisement -

ಮಾಜಿ ಕೇಂದ್ರ ಸಚಿವ ಮತ್ತು ಟಿಎಂಸಿ ಅಭ್ಯರ್ಥಿಗಳಾದ ಶತ್ರುಘ್ನ ಸಿನ್ಹಾ ಮತ್ತು ಬಾಬುಲ್ ಸುಪ್ರಿಯೋ ಅವರು ಅಸನ್ಸೋಲ್ ಲೋಕಸಭಾ ಮತ್ತು ಬ್ಯಾಲಿಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಆರಂಭಿಕ ಸುತ್ತಿನ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದು ಎರಡನೇ ಸುತ್ತಿನ ಮತ ಎಣಿಕೆಯ ನಂತರ ಸಿನ್ಹಾ 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಎರಡನೇ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಏತನ್ಮಧ್ಯೆ, ಐದನೇ ಸುತ್ತಿನ ಮತ ಎಣಿಕೆಯ ನಂತರ, ಬಾಬುಲ್ ಸುಪ್ರಿಯೋ ಅವರು ಬಲ್ಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ 8,498 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಸುಪ್ರಿಯೋ 16,548 ಮತಗಳನ್ನು ಪಡೆದರೆ, ಸಿಪಿಎಂ ಅಭ್ಯರ್ಥಿ ಸೈರಾ ಶಾ ಹಲೀಮ್ 8,049 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಮರುಝಮಾನ್ ಚೌಧರಿ 2,820 ಮತ್ತು ಬಿಜೆಪಿ ಅಭ್ಯರ್ಥಿ ಕಿಯಾ ಘೋಷ್ 1,418 ಮತಗಳನ್ನು ಪಡೆದಿದ್ದಾರೆ. ಟಿಎಂಸಿ ಶೇ.58.84, ಸಿಪಿಎಂ ಶೇ.25.33 ಹಾಗೂ ಬಿಜೆಪಿ ಶೇ.4.26ರಷ್ಟು ಮತಗಳನ್ನು ಪಡೆದಿವೆ.

- Advertisement -

ಹಿಂಸಾಚಾರದ ಘಟನೆಗಳ ನಡುವೆಯೂ ಅಸನ್ಸೋಲ್ ಲೋಕಸಭಾ ಮತ್ತು ಬ್ಯಾಲಿಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಉಪಚುನಾವಣೆಯಲ್ಲಿ ಸುಮಾರು 53 ಶೇಕಡಾ ಮತದಾನವಾಗಿತ್ತು.

Join Whatsapp