ಪ.ಬಂಗಾಳ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಿಜೆಪಿ ನಾಯಕನ ಬಂಧನ

Prasthutha|

ಹೌರಾ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಈ ಸಂಬಂಧವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ,ಬಿಜೆಪಿ ತಲೆಹಿಡುಕರನ್ನು ರಕ್ಷಿಸುತ್ತಿದೆ; ಮಹಿಳೆಯರನ್ನಲ್ಲ ಎಂದು ಪ್ರತಿಕ್ರಿಯಿಸಿದೆ.

ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ ಹೌರಾದ ಸಂಕ್ರೈಲ್‌ನಲ್ಲಿರುವ ತನ್ನ ಹೋಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು 6 ಜನ ಸಂತ್ರಸ್ತರನ್ನು ಸ್ಥಳದಿಂದ ರಕ್ಷಿಸಿದ್ದಾರೆ. ಬಿಜೆಪಿಯವರು ಹೆಣ್ಣು ಮಕ್ಕಳು ರಕ್ಷಿಸುವುದಿಲ್ಲ, ಅವರು ತಲೆಹಿಡುಕರನ್ನು ರಕ್ಷಿಸುತ್ತಾರೆ ಎಂದು ಟಿಎಂಸಿ Xನಲ್ಲಿ ವಾಗ್ದಾಳಿ ನಡೆಸಿದೆ.

- Advertisement -

ಸಂದೇಶ್‌ಖಾಲಿ ವಿಷಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಸಮರ ಸಾರಿರುವ ಹೊತ್ತಿನಲ್ಲೇ ಬಿಜೆಪಿ‌ ನಾಯಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದು ಬಂಧನವಾಗಿದೆ.



Join Whatsapp