ಬೆಳ್ತಂಗಡಿ: ರಸ್ತೆ ದುರಸ್ತಿಗೆ ಆಗ್ರಹಿಸಿ SDTU ನಿಂದ ಪ್ರತಿಭಟನಾ ವಾಹನ ಜಾಥಾ

Prasthutha|

ಬೆಳ್ತಂಗಡಿ: ಹದಗೆಟ್ಟ ಗುರುವಾಯನಕೆರೆ ಬೆಳ್ತಂಗಡಿ ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಬ್ರಹತ್ ವಾಹನ ಜಾಥಾ ನಡೆಯಿತು.

- Advertisement -


ಈ ಸಂದರ್ಭದಲ್ಲಿ ಮಾತನಾಡಿದ SDTU ಜಿಲ್ಲಾಧ್ಯಕ್ಷ ಝಾಕಿರ್ ಉಳ್ಳಾಲ್ ಮಾತನಾಡಿ, ಗುರವಾಯನಕೆರೆಯಿಂದ ಬೆಳ್ತಂಗಡಿಯವರೆಗಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ಮುಖ್ಯ ರಸ್ತೆ ಮೂಲಕ ಹೊರ ಜಿಲ್ಲೆ ಹೊರ ರಾಜ್ಯದಿಂದ ಧರ್ಮಸ್ಥಳಕ್ಕೆ ಆಗಮಿಸುವ ಪ್ರವಾಸಿಗಳಿಗೂ, ಶಾಲಾ ಕಾಲೇಜುಗಳಿಗೂ ತೆರಳುವ ವಿದ್ಯಾರ್ಥಿಗಳಿಗೂ, ಆಟೋ ಚಾಲಕರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಇಲ್ಲಿನ ಶಾಸಕರು ಅಭಿವೃದ್ಧಿಗಿಂತ ಜನರನ್ನು ಕೋಮುಭಾವನೆ ಮೂಲಕ ಕೆರಳಿಸುವ ಕಾಯಕದಲ್ಲಿ ಮಾತ್ರ ತೊಡಗಿಕೊಂಡಿರುವುದು ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ನಿಗದಿತ ಸಮಯದೊಳಗೆ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದರೆ ಮುಖ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ತಹಶೀಲ್ದಾರ್ ರವರಿಗೆ ಮನವಿಪತ್ರ ನೀಡಲಾಯಿತು.


SDTU ಜಿಲ್ಲಾ ಕಾರ್ಯದರ್ಶಿ ಶಮೀಮ್ ಯೂಸುಫ್, ಕ್ಷೇತ್ರ ಸಮಿತಿ ಅಧ್ಯಕ್ಷ ಸ್ವಾಲಿಹ್ ಮದ್ದಡ್ಕ, ಉಪಾಧ್ಯಕ್ಷ ಇಕ್ಬಾಲ್ ಸಾಲ್ಮರ, ಕಾರ್ಯದರ್ಶಿ ರಿಯಾಝ್ ಪನಕಾಜೆ ಮತ್ತಿತರರು ಉಪಸ್ಥಿತರಿದ್ದರು

- Advertisement -

Join Whatsapp