ಬೆಳ್ತಂಗಡಿ: ಶಾಲೆಯೊಳಗೆ ಕದಿಯಲು ಬಂದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

Prasthutha|

ಬೆಳ್ತಂಗಡಿ: ಶಾಲೆಯೊಳಗೆ ನುಗ್ಗಿ ಇನ್ವಾರ್ಟರ್ ಹಾಗೂ ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

- Advertisement -


ಧರ್ಮಸ್ಥಳ ಸಮೀಪದ ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬಂದಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿರುವುದನ್ನು ಗಮನಿಸಿ ಸ್ಥಳೀಯರು ಶಾಲಾ ವಠಾರದಲ್ಲಿ ಒಟ್ಟು ಸೇರಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ.


ಕಳ್ಳರನ್ನು ಹಿಡಿದು ಎಳೆದೊಯ್ಯುತ್ತಿದ್ದ ವೀಡಿಯೋ ವೈರಲ್ ಆಗಿದೆ. ಈ ಕಳ್ಳರ ಗ್ಯಾಂಗ್ ಕಡಬ ಪರಿಸರದವರಾಗಿದ್ದು, ಸಂಘಪರಿವಾರದ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ.