ಬೆಳ್ತಂಗಡಿ: ಶಾಸಕ ಪೂಂಜ ಆಪ್ತನಿಂದ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ..!

Prasthutha|

ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ: ಕೇಸ್ ದಾಖಲಿಸದ ಪೊಲೀಸರು

- Advertisement -

ಬೆಳ್ತಂಗಡಿ: ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಶಾಸಕ ಹರೀಶ್ ಪೂಂಜ ಆಪ್ತ ನವೀನ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಜಿರೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಧರ್ಮಸ್ಥಳ ನಿವಾಸಿಯಾಗಿರುವ ಮಹಿಳೆಯ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ನವೀನ್ ಎಂಬಾತ ಹಣಕಾಸಿನ ವಿಚಾರದಲ್ಲಿ ಏಕಾಏಕಿ ನುಗ್ಗಿ ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ನವೀನ್ ಕನ್ಯಾಡಿ ಎಂಬಾತನಿಂದ ಹಲ್ಲೆಗೊಳಾಗಾದ ವಿವಾಹಿತ ಮಹಿಳೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಘಟನೆ ನಡೆದು ಎರಡು ದಿನ ಆಗಿದ್ದು, ಪೊಲೀಸರು ಈವರೆಗೆ ಕೇಸ್ ದಾಖಲಿಸಿಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಹಲ್ಲೆ ಮಾಡುವ ಸಿಸಿಕ್ಯಾಮೆರಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಪೊಲೀಸರು ಸುಮೊಟೊ‌ ಕೇಸ್ ದಾಖಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಸ್ತುತ ನ್ಯೂಸ್ ಪ್ರತಿನಿಧಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈವರೆಗೆ ಕೇಸ್ ದಾಖಲಾಗಿಲ್ಲ. ಆ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Join Whatsapp