ಬೆಳ್ತಂಗಡಿ: ಅಕ್ರಮವಾಗಿ ಮತ್ತಿ (ಬಣ್ಪು) ಮತ್ತು ಹೆಬ್ಬಲಸು ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿ ನಡೆದಿದೆ.
ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್ (51) ಹಾಗೂ ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ (25) ಇವರನ್ನು ರವಿವಾರ ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿದ್ದ ಶಿಬಾಜೆಯ ಉಮೇಶ್ (35), ರೆಖ್ಯದ ವಿಜಯ್ (45) ಎಂಬವರನ್ನು ಸೋಮವಾರ ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳಿಂದ ಕಡಿತಲೆಗೆ ಸಂಬಂಧಿಸಿದ ಸೊತ್ತುಗಳು, ಮರ ಕೊಯ್ಯುವ ಒಂದು ಯಂತ್ರ, ಕತ್ತಿಯನ್ನು ವಶಪಡಿಸಲಾಗಿದೆ.