ಬೆಳ್ತಂಗಡಿ ಮೂಲದ ರಿಕ್ಷಾ ಚಾಲಕ ಸಹಿತ ಮೂವರ ಮೃತದೇಹ ತುಮಕೂರಿನ ಕುಚ್ಚoಗಿ ಕೆರೆ ಬಳಿ ಸುಟ್ಟ ಕಾರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದ ಮನಕಲುಕುವ ಈ ದುಷ್ಕ್ರತ್ಯದ ಹಿಂದೆ ಯಾರಿದ್ದಾರೆ ಎಂಬುವುದನ್ನು ಸಮಗ್ರವಾಗಿ ತನಿಖೆಗೋಳಪಡಿಸಿ ನಾಗರಿಕ ಸಮಾಜವನ್ನೇ ಆತಂಕಕ್ಕೀಡು ಮಾಡಿದ ಈ ಪ್ರಕರಣವನ್ನು ಬೇದಿಸಿ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಪ್ರಯತ್ನಿಸಲಿ ಎಂದು SDTU ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸ್ವಾಲಿಹ್ ಮದ್ದಡ್ಕ ಆಗ್ರಹಿಸಿದ್ದಾರೆ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು ಈ ದುಷ್ಕ್ರತ್ಯದ ಹಿಂದೆ ಮೋಸದ ಜಾಲ ಇದೆ ಎಂಬುವುದು ನಾಗರಿಕ ಸಮಾಜಕ್ಕೆ ದಟ್ಟವಾದ ಸಂಶಯವಾಗಿದೆ. ಈಗಾಗಲೇ ಇಂತಹ ಮೋಸದ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರು ಸಂಕಷ್ಟವನ್ನು ಎದುರಿಸಿದ್ದಾರೆ ಆದ್ದರಿಂದ ಈ ಪ್ರಕರಣದಿಂದ ನಾಗರಿಕ ಸಮಾಜವೇ ಭಯ ಭೀತಿಗೊಂಡಿದ್ದು ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯಲ್ಲಿ ವಿಶೇಷ ತಂಡ ರಚಿಸಿ ಪ್ರಕರಣವನ್ನು ಬೇದಿಸಲು ಆದೇಶ ನೀಡಬೇಕು ಎಂದು ಯೂನಿಯನ್ ಅಧ್ಯಕ್ಷ ಸ್ವಾಲಿಹ್ ಮದ್ದಡ್ಕ ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ