ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಲಾಯಿಲ ಕ್ರಾಸ್ ನಲ್ಲಿರುವ ಸಂಗಮ ಸಭಾ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಜು.8ರ ಶನಿವಾರ ಜನತಾ ದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಚಿವರು, ಶಾಸಕರಾದ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಅವರು ಬೆಳ್ತಂಗಡಿ ತಾಲೂಕಿನ ವಿವಿಧ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿ ಸಾರ್ವಜನಿಕರಿಂದ ಕುಂದು ಕೊರತೆ, ಅಹವಾಲುಗಳನ್ನು ಸ್ವೀಕರಿಸಿದರು.
374 ಫಲಾನುಭವಿಗಳಿಗೆ ವಿವಿಧ ರೀತಿಯ ಸವಲತ್ತುಗಳ ವಿತರಣೆ
94 ಸಿ ಹಕ್ಕು ಪತ್ರ ಫಲಾನುಭವಿಗಳು 12, 94 ಸಿ ಸಿ ಹಕ್ಕು ಪತ್ರ ಫಲಾನುಭವಿಗಳು 1, ಜಾನುವಾರು ಮರಣ ಪರಿಹಾರ ಧನ ಫಲಾನುಭವಿಗಳು 1, 15% ಮನೆ ಹಾನಿ ಪರಿಹಾರ ಧನ ಫಲಾನುಭವಿಗಳು 51, 30% ಮೇಲ್ಪಟ್ಟು ಮನೆ ಹಾನಿ ಪರಿಹಾರ ಧನ ಫಲಾನುಭವಿಗಳು 1, 40% ಮೇಲ್ಪಟ್ಟು ಮನೆ ಹಾನಿ ಪರಿಹಾರ ಧನ ಫಲಾನುಭವಿಗಳು 3, ಪೋಡಿ ಮುಕ್ತ ಫಲಾನುಭವಿಗಳು 8.
ಪಿಂಚಣಿಗಳು
ಬೆಳ್ತಂಗಡಿ ಹೋಬಳಿ: ಓಎಪಿ-15, ಡಿಡಬ್ಲ್ಯೂಪಿ-11, ಎಸ್ ಎಸ್ ವೈ -28, ಮನಸ್ವಿನಿ-4 ಒಟ್ಟು-58.
ಕೊಕ್ಕಡ ಹೋಬಳಿ : ಓಎಪಿ-13, ಡಿಡಬ್ಲ್ಯೂಪಿ-15, ಎಸ್ ಎಸ್ ವೈ -19, ಮನಸ್ವಿನಿ-0 ಒಟ್ಟು-47.
ವೇಣೂರು ಹೋಬಳಿ ಓಎಪಿ-35, ಡಿಡಬ್ಲ್ಯೂಪಿ-37, ಎಸ್ ಎಸ್ ವೈ -44, ಮನಸ್ವಿನಿ-1 ಒಟ್ಟು-117.
ಎಲ್ಲಾ ಹೋಬಳಿಗಳ ಒಟ್ಟು ಓಎಪಿ-63, ಡಿಡಬ್ಲ್ಯೂಪಿ-63, ಎಸ್ ಎಸ್ ವೈ -91, ಮನಸ್ವಿನಿ-5 ಒಟ್ಟು-222.
ಎಂಡೋಸ್ವಲ್ಫಾನ್ ನಿಂದ ಭಾದಿತರಾದ ವ್ಯಕ್ತಿಗಳು 58 , ಆಯುಷ್ಮಾನ್ ಭಾರತ್ ಫಲಾನುಭವಿಗಳು 17 ಸೇರಿದಂತೆ ಒಟ್ಟಾರೆ 374 ಫಲಾನುಭವಿಗಳು ವಿವಿಧ ರೀತಿಯ ಸವಲತ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಎಫ್ಓ ಅಂತೋಣಿ ಮರಿಯಪ್ಪ, ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಸುರೇಶ್ ಕುಮಾರ್, ಲಾಯಿಲಾ ಗ್ರಾ.ಪಂ. ಅಧ್ಯಕ್ಷರಾದ ಆಶಾ ಡಿಸೋಜಾ ವೇದಿಕೆಯಲ್ಲಿದ್ದರು.