ಬೆಳ್ತಂಗಡಿ: ಹಬೀಬುರ್ರಹ್ಮಾನ್ ತಂಙಳ್’ಗೆ ಬೀಳ್ಕೊಡುಗೆ

Prasthutha|

ಬೆಳ್ತಂಗಡಿ: ಇಲ್ಲಿನ ಬೆಳಾಲು ಅನ್ಸಾರಿಯಾ ಜುಮಾ ಮಸೀದಿಯಲ್ಲಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಬೇರೆಡೆಗೆ ತೆರಳಲು ಮುಂದಾಗಿರುವ ಹಬೀಬುರ್ರಹ್ಮಾನ್ ತಂಙಳ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ಮಸೀದಿಯಲ್ಲಿ ನಡೆಯಿತು.
ಮಸೀದಿ ಸಮಿತಿಯ ಅಧ್ಯಕ್ಷ ಆದಮ್ ಟಿ.ಎಚ್ ಮಾತನಾಡಿ, ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸಿರುವ ಹಬೀಬುರ್ರಹ್ಮಾನ್ ಅವರು ಬೆಳಾಲು ಮಸೀದಿಯ ಅಭಿವೃದ್ಧಿ ಮತ್ತು ನಾಡಿನ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಭಗವಂತ ಸ್ವೀಕರಿಸಲಿ ಎಂದು ಹೇಳಿದರು.
ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಬೆಳಾಲು ಮಾತನಾಡಿ, ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ, ಗುರುತಿಸಲು ಹೃದಯವಂತಿಕೆಬೇಕು. ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು”ಎಂಬ ಈ ಮಾತುಗಳು ಹಬೀಬುರ್ರಹ್ಮಾನ್ ತಂಙಳ್ ಅವರಿಗೆ ಅನ್ವಯಿಸುತ್ತದೆ. ಶಾಂತ ಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿರುವ ತಂಙಳ್ ಅವರ ಪಾಠ ಪ್ರವಚನಗಳು ಸುಲಭವಾಗಿ ಮಕ್ಕಳು ಮತ್ತು ಜನಸಾಮಾನ್ಯರಿಗೆ ಅರ್ಥವಾಗುತ್ತಿತ್ತು. ಸದಾ ಹಸನಮ್ಮುಖಿಯಾಗಿ ತಮ್ಮ ವರ್ಷಗಳ ಅಮ್ಯೂಲ ಸೇವೆ ನೀಡಿ ಮಕ್ಕಳ ಹಾಗೂ ಸಂಸ್ಥೆಯ ಉಜ್ವಲ ಭವಿಷ್ಯಕ್ಕೆ ಅವರು ಕಾರಣಕರ್ತರಾಗಿದ್ದಾರೆ ಎಂದು ಬಣ್ಣಿಸಿದರು.
ಈ ಸಮಾರಂಭಕ್ಕೆ ಜಮಾಅತ್ ಕಮಿಟಿ ಸದಸ್ಯರು, ಹಿರಿಯ ವ್ಯಕ್ತಿಗಳು, ಊರವರು ಭಾಗವಹಿಸಿದ್ದರು.



Join Whatsapp