ಬೆಳ್ತಂಗಡಿ: ಆಂಬುಲೆನ್ಸ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು

Prasthutha|

- Advertisement -

ಬೆಳ್ತಂಗಡಿ: ಎರಡು ದಿನಗಳ ಹಿಂದೆ ವಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಆಂಬ್ಯುಲೆನ್ಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಸೋಮವಾರ ಅ.21ರಂದು ಮೃತಪಟ್ಟಿದ್ದಾರೆ.

ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು. ಈ ವೇಳೆ ಚಾಲಕ ಶಬೀರ್‌ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

- Advertisement -

ಮೃತ ಮಹಿಳೆಯನ್ನು ಕಾರ್ನಾಡೂರು ಗ್ರಾಮದ ನಿವಾಸಿ ಮರಿಯಮ್ಮ (80) ಎಂದು ಗುರುತಿಸಲಾಗಿದೆ.

ಮರಿಯಮ್ಮ ಸಾವಿನೊಂದಿಗೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಮರಿಯಮ್ಮ ಅವರಿಗೆ ಶುಕ್ರವಾರ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಚಿಕಿತ್ಸೆ ನೀಡಿದ ಬಳಿಕ ಆಕೆಯ ಹೃದಯದಲ್ಲಿ ಬ್ಲಾಕ್ ಆಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಮರಿಯಮ್ಮ ಅವರನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿ ಹೊಡೆದಿದೆ.

ಮರಿಯಮ್ಮ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸೋಮವಾರ ಅವರು ಸಾವನ್ನಪ್ಪಿದ್ದಾರೆ.

ಆಂಬ್ಯುಲೆನ್ಸ್‌ ನಲ್ಲಿದ್ದ ಅವರ ಮಗ ರಜಾಕ್‌ ಎಂಬುವವರ ಕೈ ಮೂಳೆ ಮುರಿತವಾಗಿದೆ.

Join Whatsapp