ಬಳ್ಳಾರಿ । ಪ್ರತಿಭಟನೆ ನಿರತನ ಮೇಲೆ ಹಲ್ಲೆಗೈದ ಎಸ್ಐ ಅಮಾನತು

Prasthutha|

ಬಳ್ಳಾರಿ: ಪ್ರತಿಭಟನಾ ನಿರತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಣಿಕಂಠ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ವಿಚಾರಣೆಗೂ ಆದೇಶ ಹೊರಡಿಸಿದ್ದಾರೆ.

- Advertisement -

ದಿನಾಂಕ 11.08. 2022 ರಂದು ಬಳ್ಳಾರಿಯ ಕುರುಗೋಡು ಎಂಬಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಕಾನೂನು ಸುವ್ಯವಸ್ಥೆಗಾಗಿ ತೆರಳಿದ್ದ ಸಬ್ ಇನ್ಸ್’ಪೆಕ್ಟರ್ ಮಣಿಕಂಠ ಅವರು ಸಾರ್ವಜನಿಕರ ಎದುರಲ್ಲೇ ಪ್ರತಿಭಟನಾ ನಿರತ ಹೊನ್ನೂರಸ್ವಾಮಿ ಎಂಬವರಿಗೆ ಹಲ್ಲೆ ನಡೆಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ : ಪ್ರತಿಭಟನೆ ನಿರತನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಪೊಲೀಸ್ ಸಬ್ ಇನ್ಸ್’ಪೆಕ್ಟರ್: ಕಠಿಣ ಕ್ರಮಕ್ಕೆ ಆಗ್ರಹ

- Advertisement -

ಸಂತ್ರಸ್ತ ಹೊನ್ನೂರಸ್ವಾಮಿ ಅವರು ಕುರುಗೋಡು ಠಾಣೆಗೆ ನೀಡಿದ್ದ ದೂರಿನನ್ವಯ ದಿನಾಂಕ 12.08.2022 ರಂದು ಎಸ್ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕುರುಕೋಡು ಸಿ.ಪಿ.ಐ ನೀಡಿದ ವರದಿ ಆಧಾರದಲ್ಲಿ ಸಬ್ ಇನ್ಸ್’ಪೆಕ್ಟರ್ ಮಣಿಕಂಠ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ವಿಚಾರಣೆಗೊಳಪಡಿಸುವಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಆದೇಶ ಹೊರಡಿಸಿದ್ದಾರೆ. ಮಣಿಕಂಠ ಅವರ ಸ್ಥಾನಕ್ಕೆ ಹೊಸ ಸಬ್ ಇನ್ಸ್’ಪೆಕ್ಟರ್ ಆಗಿ ರಘು ಎನ್ ಅವರನ್ನು ನಿಯೋಜಿಸಲಾಗಿದೆ.



Join Whatsapp