ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ: ಓರ್ವ ಆರೋಪಿಗೆ ಜಾಮೀನು

Prasthutha|


ಬೆಳ್ಳಾರೆ: ಕಳಂಜದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಭಾಸ್ಕರ್ ಕೆ.ಎಂ ಎಂಬಾತನಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ.

- Advertisement -

2022ರ ಜು. 19ರಂದು ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ಬಜರಂಗದಳದ ಕಾರ್ಯಕರ್ತರು, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಮಸೂದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಭಿಲಾಶ್, ಸುನಿಲ್ ಕೆ, ಸುಧೀರ್, ಶಿವಪ್ರಸಾದ್, ರಂಜಿತ್ ಬಿ, ಸದಾಶಿವ ಪೂಜಾರಿ, ರಂಜಿತ್, ಭಾಸ್ಕರ ಕೆ ಎಂ ಯನ್ನು ಪೊಲೀಸರು ಬಂಧಿಸಿದ್ದರು.

- Advertisement -

ಪ್ರಕರಣದ 8ನೇ ಆರೋಪಿ ಭಾಸ್ಕರ ಕೆ.ಎಂ. ಎಂಬಾತ ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ. 03 ರಂದು ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ.



Join Whatsapp