ಬೆಳಗಾವಿ: ‘ತಾಯಿಯ ಹಸಿವು ನೋಡಲಾರದೆ ಮಗ ಆತ್ಮಹತ್ಯೆ’ ಪ್ರಕರಣಕ್ಕೆ ರೋಚಕ ತಿರುವು

Prasthutha|

ಳಗಾವಿ: ಯುವಕ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಹಸಿವಿನಿಂದ ಬಳಲುತ್ತಿದ್ದ ತಾಯಿಯ ಪರದಾಟ ನೋಡದೇ ಮಗ ಆತ್ಮಹತ್ಯೆ ಎಂದು ಸುದ್ದಿಯಾಗಿತ್ತು. ಇದೀಗ ಆ ಪ್ರಕರಣಕ್ಕೆ ದೊಡ್ಡ ತಿರುವು ದೊರಕಿದ್ದು, ಪೊಲೀಸರ ತನಿಖೆ ವೇಳೆ ಇಬ್ಬರ ಸಂಬಂಧ ತಾಯಿ-ಮಗನದ್ದು ಅಲ್ಲ ಎಂದು ತಿಳಿದು ಬಂದಿದೆ.

- Advertisement -

ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಅವರು ಪ್ರಕರಣಕ್ಕೆ ಸಂಬಂಧಿಸಿ ವಿವರಗಳನ್ನು ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಯುವಕ ಹಾಗೂ ಮಹಿಳೆ ತಾಯಿ ಮಗ ಅಲ್ಲ ಎಂದಿದ್ದಾರೆ.

ಮೃತನ ನಿಜವಾದ ತಂದೆ, ತಾಯಿಯನ್ನು ನಂದಗಡ ಪೊಲೀಸರು ಕರೆಸಿ ವಿಚಾರಣೆ ಮಾಡಿದ್ದಾರೆ.

- Advertisement -

ಮೃತ ಬಸವರಾಜ್, ಶಾಂತವ್ವಳೊಂದಿಗೆ ಕಳೆದ 14‌ವರ್ಷದಿಂದ ಜತೆಗಿದ್ದ. ಕೂಲಿ ಕೆಲಸಕ್ಕಾಗಿ ಗೋವಾ, ಬೆಂಗಳೂರು ಸೇರಿ ಅನೇಕ ಕಡೆ ಇಬ್ಬರೂ ಜತೆಯಲ್ಲಿ ಹೋಗುತ್ತಿದ್ದರು. ಗೋವಾದಿಂದ ವಾಪಸಾಗುವ ವೇಳೆ ಇಬ್ಬರು ಪಾನಮತ್ತರಾಗಿದ್ದರು.ವಾಂತಿ ಮಾಡಿಕೊಂಡ ಕಾರಣ ರೈಲಿನಿಂದ ಕೆಳಗೆ ಇಳಿಸಲಾಗಿತ್ತು. ಬಳಿಕ ಶಾಂತವ್ವಳನ್ನು ಅಳ್ನಾವರದಲ್ಲಿ ಬಿಟ್ಟು ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ.

ಎನ್ ಜಿಓ ತನಿಖೆ ಪೂರ್ವಗೊಳ್ಳುವ ಮೊದಲೇ ತಾಯಿ, ಮಗ ಎಂಬ ನಿರ್ಧಾರಕ್ಕೆ ಬಂದಿದ್ದು, ಖಾನಾಪುರ ಮೂಲದ ಎನ್ ಜಿ ಓಗೆ ನೋಟಿಸ್ ಕೊಡಲಾಗಿದೆ‌.

ಅನುಮಾನಸ್ಪದ ವಿಚಾರದಲ್ಲಿ ತಾವೇ ತಿರ್ಮಾನಕ್ಕೆ ಬರೋದು ತಪ್ಪು.ಇಬ್ಬರು ಪರಸ್ಪರ ಪರಿಚತರಾಗಿದ್ದು, ಜತೆಯಲ್ಲೇ ಇದ್ದರು . ಸಾವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆಯೂ ತನಿಖೆ‌ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಹಸಿವು ಹಾಗೂ ತಾಯಿಯ ಕಷ್ಟವನ್ನು ನೋಡಲಾಗದೆ ಬೆಳಗಾವಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿಯಡಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ‘ಸತ್ತ ಸರಕಾರ ಸಾವಿನ ವ್ಯಾಪಾರ’ ಎಂಬ ಹ್ಯಾಷ್ ಟ್ಯಾಗ್ ಅಡಿ ಸರಣಿ ಟ್ವೀಟ್ (ಎಕ್ಸ್) ಮಾಡಿರುವ ಎಚ್ಡಿಕೆ, ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.



Join Whatsapp