ಬೆಳಗಾವಿ ಗಡಿ ವಿವಾದ: ಪ್ರಧಾನಿ ಭೇಟಿಯಾಗಲಿರುವ ಮಹಾರಾಷ್ಟ್ರ ಸರ್ವ ಪಕ್ಷ ನಿಯೋಗ

Prasthutha|

ಬೆಳಗಾವಿ: ಬೆಳಗಾವಿ ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಸರ್ವ ಪಕ್ಷದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದೆ ಎಂದು ಸಂಸದ, ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಸದಸ್ಯ ಧೈರ್ಯಶೀಲ ಮಾನೆ ತಿಳಿಸಿದ್ದಾರೆ.

- Advertisement -

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರಾಠಿ ಭಾಷಿಕರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾಷಿಕ ಅಲ್ಪಸಂಖ್ಯಾತ ಕಚೇರಿಯನ್ನು ಚೆನ್ನೈಗೆ ಸ್ಥಳಾಂತರಿಸಲಾಗಿದೆ. ಮರಾಠಿ ಭಾಷಿಕರು ಪಾಕಿಸ್ತಾನದಲ್ಲಿ ಇಲ್ಲ. ಕರ್ನಾಟಕ‌ ಸರ್ಕಾರ ಮರಾಠಿ ಭಾಷೆಯ ಅವಮಾನ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಸಭಾಪತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಭಾಪತಿ ನಿಷ್ಪಕ್ಷಪಾತವಾಗಿ ಜವಾಬ್ದಾರಿ ವಹಿಸಬೇಕಾಗುತ್ತದೆ. ಅವರು ಒಂದೇ ಪಕ್ಷಕ್ಕೆ‌ ಸೀಮಿತವಾದ ಸಭಾಧ್ಯಕ್ಷರಲ್ಲ. ಆದರೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ಮರಾಠಿ ಭಾಷಿಕರ ಮನಸ್ಸಿಗೆ ನೋವುಂಟಾಗುವಂತೆ ಮಾತನಾಡಿದ್ದಾರೆ. ಇದನ್ನು ದಾಖಲೆ‌ ಸಮೇತ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕರ್ನಾಟಕ ಮತ್ತು‌ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿ ಶಾಂತಿಯುತವಾಗಿ ಹಾಗೂ ಯಾರಿಗೂ ನೋವಾಗದಂತೆ‌ ಇರುವಂತೆ ತಿಳಿಸಿದ್ದರು. ಆದರೆ ಮೇಲಿನವರು ಹೇಳಿದರೂ ಕೆಳಗಿನವರು ಅದನ್ನು ಪಾಲಿಸುತ್ತಿಲ್ಲ ಎಂದು ಧೈರ್ಯಶೀಲ ಆರೋಪಿಸಿದರು.

Join Whatsapp